ಧನ ಹಾಗೂ ಸಂಪತ್ತು ಗಳಿಸಲು ನಾವು ಏನೇನು ಮಾಡೋದಿಲ್ಲ ಹೇಳಿ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತೇವೆ. ಜ್ಯೋತಿಷ್ಯದ ಪ್ರಕಾರ ನಾವು ಮಾಡುವ ಕೆಲಸದ ಜೊತೆಗೆ ಬೆಳ್ಳಂಬೆಳಿಗ್ಗೆ ಎದ್ದ ತಕ್ಷಣ ನಾವು ನೋಡುವ ವಸ್ತುಗಳು ಹಾಗೂ ಅದೃಷ್ಟದ ನಡುವೆ ಸಂಬಂಧವಿರುತ್ತದೆ.
ಬೆಳಿಗ್ಗೆ ಯಾರ ಮುಖ ನೋಡಿದ್ನೋ, ಇವತ್ತಿನ ದಿನ ಹಾಳಾಯ್ತು ಅನ್ನೋರನ್ನು ನಾವು ಕೇಳಿದ್ದೇವೆ. ಜ್ಯೋತಿಷ್ಯ ಬೆಳಿಗ್ಗೆ ಏನನ್ನು ನೋಡಿದ್ರೆ ಒಳ್ಳೆಯದಾಗುತ್ತೆ. ಏನನ್ನು ನೋಡಿದ್ರೆ ಕೆಟ್ಟದ್ದಾಗುತ್ತೆ ಎಂಬುದನ್ನು ಹೇಳಿದೆ.
ನೀವು ಏಳ್ತಾ ಇದ್ದಂತೆ ಶಂಖ, ಗಂಟೆ, ಪೂಜೆಯ ಶಬ್ದ ಕೇಳಿದ್ರೆ ನೀವು ಮಾಡುವ ಕಾರ್ಯದಲ್ಲಿ ಶುಭ ನಿಶ್ಚಿತ.
ಬೆಳಿಗ್ಗೆ ಎದ್ದ ತಕ್ಷಣ ಹಾಲು ಅಥವಾ ಮೊಸರು ತುಂಬಿದ ಪಾತ್ರೆ ಕಂಡರೆ ಶೀಘ್ರದಲ್ಲಿ ನಿಮ್ಮ ಮೇಲೆ ಲಕ್ಷ್ಮಿ ಕೃಪೆ ಬೀಳಲಿದೆ ಎಂದು ಅರ್ಥ ಮಾಡಿಕೊಳ್ಳಿ.
ಬೆಳ್ಳಂಬೆಳಿಗ್ಗೆ ನಿಮಗೆ ಕಬ್ಬು ಕಂಡ್ರೆ ಶೀಘ್ರದಲ್ಲಿಯೇ ಹಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎಂದು ಅರ್ಥೈಸಿಕೊಳ್ಳಿ.
ಮುಖ್ಯವಾದ ಕೆಲಸದ ಮೇಲೆ ಹೊರಗೆ ಹೋಗ್ತಾ ಇರುವ ವೇಳೆ ಕೆಂಪು ಬಣ್ಣದ ಸೀರೆಯುಟ್ಟ ಅಥವಾ ಶೃಂಗಾರಗೊಂಡ ಮಹಿಳೆ ಕಣ್ಣಿಗೆ ಬಿದ್ದರೆ ನೀವು ಹೋಗುತ್ತಿರುವ ಕೆಲಸದಲ್ಲಿ ಜಯ ಸಿಗುವುದು ನಿಶ್ಚಿತ. ಲಕ್ಷ್ಮಿ ಕೃಪೆ ನಿಮ್ಮ ಮೇಲಿರುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಪೂಜೆ ಸಾಮಗ್ರಿಗಳಾದ ತೆಂಗಿನ ಕಾಯಿ, ಹಣ್ಣು, ಹೂ, ನವಿಲುಗರಿ ಇತ್ಯಾದಿ ವಸ್ತುಗಳು ಕಣ್ಣಿಗೆ ಬಿದ್ದರೆ ಅದು ಶುಭ ಸಂಕೇತ.
ಮನೆಯಿಂದ ಹೊರ ಹೋಗುವಾಗ ಬಿಳಿ ಬಣ್ಣದ ಹಸು ಕಣ್ಣಿಗೆ ಬಿದ್ದರೆ ಅದು ಕೂಡ ಶುಭ ಸಂಕೇತ.
ದಾರಿಯಲ್ಲಿ ಹೋಗುವಾಗ ಬಿಳಿ ಹಾವು ಕಂಡರೂ ಅದು ಶುಭ.
ಶುಕ್ರವಾರ ಕನ್ಯೆಯಾದವಳು ತುಂಬಿದ ಕಳಶದೊಂದಿಗೆ ಕಾಣಿಸಿಕೊಂಡರೆ ಬಹಳ ಒಳ್ಳೆಯದು. ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ.
ದಾರಿಯಲ್ಲಿ ನಾಯಿ, ಮಂಗ ಅಥವಾ ಯಾವುದೇ ಹಕ್ಕಿ ಕಾಣಿಸಿಕೊಂಡರೆ ನೀವು ಹೋಗುತ್ತಿರುವ ಕಾರ್ಯದಲ್ಲಿ ಜಯ ಸಿಕ್ಕಂತೆ.
ಹಾಗೆ ಮನೆಯಿಂದ ಹೊರ ಬಿದ್ದ ತಕ್ಷಣ ಗೂಬೆ ಕಣ್ಣಿಗೆ ಬಿದ್ದರೂ ಒಳ್ಳೆಯದು. ಗೂಬೆ ಮಹಾಲಕ್ಷ್ಮಿ ವಾಹನ. ಹಾಗಾಗಿ ಅದು ಬಹಳ ಮಂಗಳಕರ.