ಈ ಸೂಪ್‌ಗಳನ್ನು ಕುಡಿದ್ರೆ ಬೇಗ ಇಳಿಸಬಹುದು ತೂಕ

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅದೆಷ್ಟು ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಲು ಸಾಧ್ಯವಾಗುವುದೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ಆಹಾರ ಕ್ರಮವನ್ನು ಬದಲಾಯಿಸದೇ ಇರುವುದು. ಕೆಲವು ಸೂಪ್‌ಗಳ ಸಹಾಯದಿಂದ ತೂಕವನ್ನು ಕಡಿಮೆ ಮಾಡಬಹುದು.

ಎಲೆಕೋಸು ಸೂಪ್: ಇದು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಕೆ, ಸಿ, ಬಿ6 ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.

ಬೇಳೆಗಳು ಮತ್ತು ಕುಂಬಳಕಾಯಿ ಸೂಪ್: ಈ ಸೂಪ್‌ ಕೂಡ ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ಇವೆರಡನ್ನೂ ಬೆರೆಸಿ ಸೂಪ್ ಮಾಡಿದರೆ ರುಚಿ ಕೂಡ ಚೆನ್ನಾಗಿರುತ್ತದೆ. ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಮಸೂರ್‌ ದಾಲ್ ಮತ್ತು ಕುಂಬಳಕಾಯಿಯಲ್ಲಿ ಕಂಡುಬರುತ್ತವೆ. ಸಸ್ಯಾಹಾರಿಗಳಿಗೆ ಇದು ಉತ್ತಮ ಆಯ್ಕೆ.

ಚಿಕನ್ ಸೂಪ್: ಚಿಕನ್‌ ಸೂಪ್‌ ಸಹ ತೂಕವನ್ನು ಕಡಿಮೆ ಮಾಡುತ್ತದೆ. ಮೊದಲು ನೀವು ಚಿಕನ್ ಅನ್ನು ಚೆನ್ನಾಗಿ ಬೇಯಿಸಬೇಕು, ನಂತರ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಮತ್ತು ಪಲಾವ್‌ಎಲೆ ಮತ್ತು ಹಸಿರು ಮೆಣಸಿನಕಾಯಿಯನ್ನು ಫ್ರೈ ಮಾಡಿ ಬೆರೆಸಿ. ಅದಕ್ಕೆ  ಈರುಳ್ಳಿ ಸೇರಿಸಿ. ನೀರು ಹಾಕಿ ಚೆನ್ನಾಗಿ ಬೇಯಿಸಿದ ನಂತರ, ಉಪ್ಪು ಮತ್ತು ಸ್ವಲ್ಪ ಪ್ರಮಾಣದ ಆಮ್ಚೂರ್ ಪುಡಿಯನ್ನು ಕೂಡ ಸೇರಿಸಬಹುದು.

ಪನೀರ್ ಮತ್ತು ಪಾಲಕ್ ಸೂಪ್: ತೂಕ ಇಳಿಸಲು ಈ ಸೂಪ್‌ ಬೆಸ್ಟ್‌. ಪಾಲಕ್‌ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರೋಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಕೂಡ ಇದರಲ್ಲಿ ಸಮೃದ್ಧವಾಗಿದೆ. ಹಾಗಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಹ ಸಿಗುತ್ತವೆ.

ಬಟಾಣಿ ಮತ್ತು ಕ್ಯಾರೆಟ್‌ ಸೂಪ್‌ : ಕ್ಯಾರೆಟ್‌ನಲ್ಲಿ ವಿಟಮಿನ್-ಎ ಹೇರಳವಾಗಿದೆ. ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಅಂಶ ಬಟಾಣಿಯಲ್ಲಿ ಹೇರಳವಾಗಿದೆ. ಇದು ನಿಮ್ಮ ಆರೋಗ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಲ್ಲದು. ಬಟಾಣಿ ಮತ್ತು ಕ್ಯಾರೆಟ್‌ ಎರಡನ್ನೂ ಬೆರೆಸಿ ಸೂಪ್‌ ಮಾಡಿ ಕುಡಿದರೆ ತೂಕ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read