ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ಅನ್ನೋ ಮಾತು ಕೇಳಿರ್ತೀರಾ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾಚಿಕೆಪಡುತ್ತಾರೆ.
ಹಾಗಾಗಿ ನೀವೇನಾದ್ರೂ ಸಂಗಾತಿಯನ್ನು ಮೆಚ್ಚಿಸಲು ಬಯಸಿದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿ ತಿಳಿದುಕೊಳ್ಳಲಿ ಅಂತಾ ಬಯಸುವ ಕೆಲವು ರಹಸ್ಯಗಳು ಯಾವುದು ಅಂತ ತಿಳಿದುಕೊಳ್ಳೋಣ.
ಸಂಗಾತಿಯ ರಹಸ್ಯಗಳು ನಿಮಗೆ ತಿಳಿದಿರಲಿ : ಪತ್ನಿ ಅಥವಾ ಗೆಳತಿಯನ್ನು ಮೆಚ್ಚಿಸಲು ಪುರುಷರು ಹರಸಾಹಸ ಮಾಡ್ತಾರೆ, ಆದ್ರೂ ಅದರಲ್ಲಿ ಯಶಸ್ವಿಯಾಗೋದೇ ಇಲ್ಲ. ಯಾಕಂದ್ರೆ ಮಹಿಳೆಯರ ಭಾವನೆಗಳನ್ನು ಅರ್ಥಮಾಡಿಕೊಳ್ಳೋದು ತುಂಬಾನೇ ಕಷ್ಟ. ಹಾಗಾಗಿ ಅವರ ರಹಸ್ಯಗಳು ತಿಳಿದಿದ್ದರೆ, ಅವರಿಗೆ ಇಷ್ಟವಾಗುವುದನ್ನೇ ಮಾಡಬಹುದು.
ಕಾಳಜಿಯುಳ್ಳವರೇ ಇಷ್ಟ : ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವವರನ್ನೇ ಮಹಿಳೆಯರು ಇಷ್ಟಪಡುತ್ತಾರೆ. ಸಂಗಾತಿ ದುಃಖದಲ್ಲಿರುವಾಗ ಅವರನ್ನು ನಿಮ್ಮ ತೋಳುಗಳಲ್ಲಿ ತೆಗೆದುಕೊಂಡು ಕಾಳಜಿ ವಹಿಸಿದರೆ, ಅವರನ್ನು ಖುಷಿಪಡಿಸಬಹುದು.
ವಿಭಿನ್ನವಾಗಿ ಪ್ರೀತಿ ವ್ಯಕ್ತಪಡಿಸಿ : ಸಂಗಾತಿ ಬಗ್ಗೆ ನಿಮಗಿರೋ ಪ್ರೀತಿ ವ್ಯಕ್ತಪಡಿಸಲು ಸರ್ಕಸ್ ಮಾಡಲೇಬೇಕು. ವಿಶೇಷವಾದದ್ದೇನಾದ್ರೂ ಮಾಡಿದ್ರೆ ಅದನ್ನವರು ಇಷ್ಟಪಡ್ತಾರೆ. ಸರ್ಪ್ರೈಸ್ ಗಳು ಕೊಟ್ಟು ನಿಮ್ಮ ಸಂಗಾತಿಯನ್ನು ಮೆಚ್ಚಿಸಬಹುದು.
ಆಗಾಗ ಹೊಗಳುತ್ತಿರಿ : ಹೊಗಳಿಕೆ ಎಲ್ಲರಿಗೂ ಇಷ್ಟ. ನೀವು ಆಗಾಗ ಸಂಗಾತಿಯನ್ನು ಹೊಗಳುತ್ತಲೇ ಇರಿ. ಇದ್ರಿಂದ ನಿಮ್ಮ ಬಗ್ಗೆ ಅವರು ಪ್ರಭಾವಿತರಾಗ್ತಾರೆ.
ಎಲ್ಲದಕ್ಕೂ ಅಡ್ಡಿಪಡಿಸಬೇಡಿ : ಎಲ್ಲಾ ವಿಚಾರದಲ್ಲೂ ಮೂಗು ತೂರಿಸಿದ್ರೆ ಮಹಿಳೆಯರಿಗದು ಇಷ್ಟವಾಗೋದಿಲ್ಲ. ನೀವೆಷ್ಟು ಕಡಿಮೆ ಹಸ್ತಕ್ಷೇಪ ಮಾಡ್ತೀರೋ ಅಷ್ಟು ಒಳ್ಳೆಯದು. ತಾನಾಗೇ ಆಕೆ ಹೇಳುವವರೆಗೂ ಕಾಯಿರಿ.
ಮಾತು ಮಾತಿಗೂ ಜಗಳ ಬೇಡ : ಎಲ್ಲಾ ಸಂಬಂಧಗಳಲ್ಲೂ ಜಗಳ ಇದ್ದಿದ್ದೇ. ಆದ್ರೆ ಯಾವಾಗಲೂ ಕಿತ್ತಾಡುತ್ತಿದ್ರೆ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಜಗಳ ಮಾಡದೇ ಹೊಂದಾಣಿಕೆಯಿಂದಿರಲು ಪ್ರಯತ್ನಿಸಿ.