ಮೇಷ : ಆಧ್ಯಾತ್ಮಿಕತೆ ಮತ್ತು ಈಶ್ವರನ ಆರಾಧನೆಯಿಂದ ಅನಿಷ್ಠ ವಿಚಾರಗಳಿಂದ ಮುಕ್ತಿ ಪಡೆಯಬಹುದು. ಮಾನಹಾನಿಯಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣ ಇರಲಿ.
ವೃಷಭ : ತನು-ಮನ ಆರೋಗ್ಯವಾಗಿಯೂ, ಪ್ರಫುಲ್ಲವಾಗಿಯೂ ಇರುತ್ತದೆ. ಮಿತ್ರರೊಂದಿಗೆ ಪ್ರವಾಸ ಆಯೋಜಿಸಲಿದ್ದೀರಿ. ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಮಿಥುನ : ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭಕ್ಕೆ ಇಂದು ಶುಭ ದಿನ. ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ.
ಕರ್ಕ : ಇಂದು ನಿಮಗೆ ಒಳಿತಾಗುತ್ತದೆ. ತಂದೆಯಿಂದ ಲಾಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಧನಲಾಭದ ಯೋಗವಿದೆ. ಹಿರಿಯ ಅಧಿಕಾರಿಗಳು ನಿಮ್ಮಿಂದ ಪ್ರಸನ್ನರಾಗುತ್ತಾರೆ.
ಸಿಂಹ : ಇಂದು ಶುಭ ಫಲವಿದೆ. ಭಿನ್ನ-ವಿಭಿನ್ನ ರೀತಿಯ ಲಾಭಗಳು ದೊರೆಯುತ್ತವೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸಮಾರಂಭಕ್ಕೆ ತೆರಳುವ ಸಾಧ್ಯತೆ ಇದೆ. ಧನಪ್ರಾಪ್ತಿಯಾಗಬಹುದು.
ಕನ್ಯಾ : ಕುಟುಂಬದಲ್ಲಿ ಆನಂದದ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ನಕಾರಾತ್ಮಕ ಆಲೋಚನೆಗಳಿಂದ ಮನಸ್ಸಿನಲ್ಲಿ ದುಗುಡ ಹೆಚ್ಚಬಹುದು.
ತುಲಾ : ಇಂದು ವಿಶೇಷ ಲಾಭಗಳು ದೊರೆಯಬಹುದು. ವ್ಯಾಪಾರ-ದಂಧೆಯಲ್ಲಿ ವೃದ್ಧಿಯ ಜೊತೆಜೊತೆಗೆ ಆದಾಯವೂ ವೃದ್ಧಿಸುತ್ತದೆ. ಉದ್ಯೋಗಿಗಳಿಗೆ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸುಖ-ಸಂತೋಷವಿರಲಿದೆ.
ವೃಶ್ಚಿಕ : ಮಾತು ಮತ್ತು ಕೋಪ ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯ. ನೆಗಡಿ ಮತ್ತು ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗಬಹುದು. ಖರ್ಚು ಹೆಚ್ಚಾಗಲಿದೆ.
ಧನು : ಇವತ್ತು ನಿಮಗೆ ಶುಭಫಲವಿದೆ. ಹೊಸ ಕಾರ್ಯದ ಆಯೋಜನೆ ಸಫಲವಾಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪದೋನ್ನತಿ ಸಾಧ್ಯತೆ ಇದೆ. ಹಣ, ಗೌರವ-ಪ್ರತಿಷ್ಠೆ ದೊರೆಯಬಹುದು.
ಮಕರ : ನಿಮ್ಮ ವಿಚಾರಗಳಲ್ಲಿ ಶೀಘ್ರ ಪರಿವರ್ತನೆಯಾಗುತ್ತದೆ. ಮಹಿಳೆಯರು ತಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಪ್ರಯಾಣವನ್ನು ರದ್ದು ಮಾಡಿ. ಆಕಸ್ಮಿಕವಾಗಿ ಹಣ ಖರ್ಚಾಗುತ್ತದೆ.
ಕುಂಭ : ಇಂದು ಸಮಾಧಾನದಿಂದಿರುವುದು ಒಳಿತು. ಹೊಸ ಕಾರ್ಯ ಆರಂಭಿಸಬೇಡಿ. ಕೋಪದ ಮೇಲೆ ನಿಯಂತ್ರಣವಿರಲಿ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ಮೀನ : ಶಾರೀರಿಕವಾಗಿ ಶಿಥಿಲತೆ ಮತ್ತು ಆಲಸ್ಯದ ಅನುಭವವಾಗುತ್ತದೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮಧ್ಯಾಹ್ನದ ನಂತರ ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ.