ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಟೇಬಲ್ ಮ್ಯಾನರ್ಸ್ ಬಗ್ಗೆ ತಿಳಿದಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಅದನ್ನು ಅಳವಡಿಸುವುದು ಮರೆತುಹೋಗುತ್ತದೆ. ಎಲ್ಲರೂ ಪಾಲಿಸಬೇಕಾದ ಕೆಲವು ಊಟದ ಟೇಬಲ್ ನ ಘನತೆಯ ಬಗ್ಗೆ ತಿಳಿದುಕೊಳ್ಳೋಣ.
ದೊಡ್ಡದಾಗಿ ಬಾಯಿ ತೆಗೆದು ಊಟ ಮಾಡುವ ಅಭ್ಯಾಸ ನಿಮಗಿರಬಹುದು. ಮನೆಯಲ್ಲಿ ಯಾರೂ ಇಲ್ಲದಾಗ, ಅಥವಾ ನಿಮ್ಮ ಮನೆಮಂದಿಯ ಮುಂದೆ ಮಾತ್ರ ಹೀಗೆ ಊಟ ಮಾಡುವುದು ಸಾಮಾನ್ಯ ಸಂಗತಿ. ಅದೇ ಹೋಟೆಲ್ ಗಳಲ್ಲಿ, ಪಾರ್ಟಿಗಳಲ್ಲಿ ಹೀಗೆ ತಿನ್ನುವುದು ಸಭ್ಯವಲ್ಲ.
ಇನ್ನು ಕೆಲವರಿಗೆ ಬೇಗ ಬೇಗ ತಿನ್ನುವ ಅಭ್ಯಾಸ ಇರುತ್ತದೆ. ಗಬಗಬನೆ ತಿನ್ನುವುದು ಕೂಡಾ ಟೇಬಲ್ ಮ್ಯಾನರ್ಸ್ ಎಂದು ಕರೆಯಿಸಿಕೊಳ್ಳುವುದಿಲ್ಲ. ಟೇಬಲ್ ನಲ್ಲಿ ಕುಳಿತಾಗ ಎಲ್ಲರಿಗೂ ಫುಡ್ ಸರ್ವ್ ಆಗುವ ತನಕ ಕಾಯಿರಿ. ಬಳಿಕ ತಿನ್ನಿ. ತಟ್ಟೆಗೆ ಹಾಕಿದಾಕ್ಷಣ ತಿನ್ನುವುದು ಸಭ್ಯ ಲಕ್ಷಣವಲ್ಲ.
ತಿನ್ನುವಾಗ ಶಬ್ದ ಬರುವಂತೆ ಜಗಿಯುವುದು, ಕೆಳಗೆ ಬೀಳಿಸಿಕೊಂಡು ತಿನ್ನುವುದು ಮಾಡದಿರಿ. ಇದರಿಂದ ಅಕ್ಕ ಪಕ್ಕದಲ್ಲಿ ಕುಳಿತವರಿಗೂ ಮುಜುಗರವಾಗುತ್ತದೆ ಎಂಬುದು ನಿಮಗೆ ನೆನಪಿರಲಿ.
ತಿನ್ನುವಾಗ ಮಾತನಾಡುವುದರಿಂದ ನಿಮ್ಮ ಬಾಯಿಯ ಆಹಾರ ಇನ್ನೊಬ್ಬರ ತಟ್ಟೆಗೆ ಹಾರಬಹುದು. ಇನ್ನು ಗುಂಪಲ್ಲಿ ಕುಳಿತು ಊಟ ಮಾಡುವಾಗ ಬೆರಳುಗಳನ್ನು ನೆಕ್ಕದಿರಿ. ಹೀಗಿದ್ದೂ ಉಡುಪಿನ ಮೇಲೆ ಆಹಾರ ಬಿದ್ದರೆ ಟಿಶ್ಯೂ ನೆರವಿನಿಂದ ಒರೆಸಿಕೊಳ್ಳಿ.
ಕೈಯಲ್ಲಿ ಆಹಾರ ಹಿಡಿದುಕೊಂಡು ಮಾತನಾಡುವುದು ಕೂಡಾ ಟೇಬಲ್ ಮ್ಯಾನರ್ಸ್ ಗೆ ವಿರುದ್ಧವಾದುದು. ಒಂದೋ ಬಾಯಿಗೆ ಹಾಕಿ ತಿಂದ ಬಳಿಕ ಮಾತನಾಡಿ. ಇಲ್ಲವಾದರೆ ಚಮಚ ಕೆಳಗಿಟ್ಟು ಮಾತನಾಡಿ.