ಕೂದಲಿನ ಆರೈಕೆ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ

ಮುಖವು ಸುಂದರವಾಗಿ ಕಾಣಬೇಕು ಅಂದರೆ ಕೇವಲ ತ್ವಚೆಯ ಆರೈಕೆಯಷ್ಟೇ ಮಾಡಿದರೆ ಸಾಲದು ತ್ವಚೆಯ ಜೊತೆಯಲ್ಲಿ ಕೂದಲಿನ ಆರೈಕೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ನಾವು ನಮ್ಮ ದಿನನಿತ್ಯದ ದಿನಚರಿಯಲ್ಲಿ ಕೂದಲಿಗೆ ಯಾವುದೆ ರೀತಿಯಲ್ಲಿ ಹಾನಿ ಉಂಟಾಗದಂತೆ ನೋಡಿಕೊಳ್ಳಬೇಕು.

ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಾಕಬೇಡಿ :

ಸ್ನಾನ ಮಾಡುವ ಮೊದಲು ತಲೆಗೆ ಎಣ್ಣೆ ಹಚ್ಚುವುದು ಉತ್ತಮ. ಆದರೆ ಅನೇಕರು ಕೂದಲಿಗೆ ಗಂಟೆಗಟ್ಟಲೇ ಎಣ್ಣೆ ಹಚ್ಚುತ್ತಾರೆ. ಈ ರೀತಿ ಮಾಡಿದರೆ ನೆತ್ತಿಯಲ್ಲಿ ಮಣ್ಣು ನೆಲೆಗೊಳ್ಳಲು ಕಾರಣವಾಗಬಹುದು. ಇದರಿಂದ ಕೂದಲು ಉದುರುವಿಕೆ ಆರಂಭವಾಗುತ್ತದೆ.

ಸರಿಯಾದ ಶಾಂಪೂ :

ಶಾಂಪೂ ಕೂದಲನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ ಆದ್ದರಿಂದ ಸರಿಯಾದ ಶಾಂಪೂ ಆಯ್ಕೆ ಮಾಡಬೇಕು. ಹೆಚ್ಚಿನವರು ವೈದ್ಯರ ಸಲಹೆಯಿಲ್ಲದೆ ಶ್ಯಾಂಪೂಗಳನ್ನು ಬಳಸಲು ಪ್ರಾರಂಭಿಸುತ್ತಾರೆ ಮತ್ತು ಹಲವಾರು ಶಾಂಪೂಗಳಲ್ಲಿ ರಾಸಾಯನಿಕಗಳನ್ನು ಅತಿಯಾಗಿ ಬಳಸಲಾಗಿರುತ್ತದೆ ಮತ್ತು ಅವು ಕೂದಲು ಹಾನಿಗೆ ಕಾರಣವಾಗುತ್ತವೆ.

ಅತಿಯಾಗಿ ಕೂದಲನ್ನು ತೊಳೆಯುವುದು :

ಹೆಚ್ಚಿನವರು ಕೂದಲನ್ನು ತೊಳೆದಷ್ಟೂ ಸ್ವಚ್ಛವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅತಿಯಾಗಿ ಕೂದಲನ್ನು ತೊಳೆಯುವುದು ಸಹ ಒಳ್ಳೆಯದಲ್ಲ. ಇದರಿಂದ ಕೂದಲು ಹೆಚ್ಚೆಚ್ಚು ಹಾನಿಗೊಳಗಾಗುತ್ತದೆ. ಕೂದಲಿನೊಳಗೆ ಅತಿಯಾಗಿ ನೀರು ಪ್ರವೇಶಿಸುವುದರಿಂದ ಕೂದಲಿನ ಬೇರು ದುರ್ಬಲಗೊಳ್ಳುತ್ತಾ ಹೋಗುತ್ತದೆ.

ಕಂಡೀಷನರ್ :

ಕೂದಲನ್ನು ಶಾಂಪೂ ಮಾಡಿದ ನಂತರ, ಅವುಗಳನ್ನು ಕಂಡೀಷನರ್ ಮಾಡುವುದು ಉತ್ತಮ. ಕಂಡೀಷನರ್ ಅನ್ನು ಹಚ್ಚುವಾಗ ಅನೇಕ ಬಾರಿ ಜನರು ತಮ್ಮ ಕೂದಲನ್ನು ಉಜ್ಜಲು ಪ್ರಾರಂಭಿಸುತ್ತಾರೆ .ಇದು ಕೂದಲಿನ ಹಾನಿಗೆ ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read