ಕಾಫಿ ಪೌಡರ್ ಹೆಚ್ಚು ದಿನ ಬಾಳಿಕೆ ಬರಲು ಈ ರೀತಿ ಸಂಗ್ರಹಿಸಿಡಿ

ಪ್ರತಿ ಮನೆಯಲ್ಲೂ ಕಾಫಿ ತಯಾರಿಸುತ್ತಾರೆ. ಕಾಫಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಹಾಗಾಗಿ ಹೆಚ್ಚಿನ ಜನರು ತಮ್ಮ ದಿನವನ್ನು ಕಾಫಿ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಕಾಫಿ ಪುಡಿಯನ್ನು ಹೆಚ್ಚು ಕಾಲ ಸ್ಟೋರ್ ಮಾಡಿ ಇಡಲು ಸಾಧ್ಯವಿಲ್ಲ. ಅದು ಬೇಗ ಗಟ್ಟಿಯಾಗುತ್ತದೆ. ಹಾಗಾಗಿ ಕಾಫಿ ಪುಡಿ ಸ್ಟೋರ್ ಮಾಡಲು ಈ ವಿಧಾನ ಅನುಸರಿಸಿ.

ಕಾಫಿ ಪುಡಿಯನ್ನು ಫ್ರಿಜ್ ನಲ್ಲಿಡಿ. ಇದರಿಂದ ಪುಡಿ ಗಟ್ಟಿಯಾಗುವುದಿಲ್ಲ. ಆದರೆ ಕಾಫಿ ಪುಡಿಯನ್ನು ಗಾಳಿಯಾಡದ ಗಾಜಿನಲ್ಲಿ ಹಾಕಿಡಿ. ಇದನ್ನು ಹಲವು ತಿಂಗಳುಗಳ ಕಾಲ ಬಳಸಬಹುದು.

ಕಾಫಿ ಜಾರ್ ನಲ್ಲಿ ಸ್ವಲ್ಪ ಅಕ್ಕಿಕಾಳುಗಳನ್ನು ಹಾಕಿ ಅದರಲ್ಲಿ ಕಾಫಿ ಪುಡಿಯನ್ನು ಹಾಕಿಡಿ. ಇದರಿಂದ ಕಾಫಿ ರುಚಿ ಕೆಡುವುದಿಲ್ಲ ಮತ್ತು ಅದು ಹಲವು ತಿಂಗಳುಗಳವರೆಗೆ ಬರುತ್ತದೆ.

ಕಾಫಿ ಪುಡಿ ಉಂಡೆಯಾಗುತ್ತಿದ್ದರೆ ಕಾಫಿ ಬಾಟಲಿನಲ್ಲಿ ಟಿಶ್ಯೂ ಪೇಪರ್ ಹಾಕಿ 1 ಚಮಚ ಟೀ ಎಲೆಗಳನ್ನು ಸೇರಿಸಿ ಬಳಿಕ ಕಾಫಿ ಪುಡಿ ಹಾಕಿಡಿ. ಕಾಫಿ ಪುಡಿಯಲ್ಲಿ ಕಮಲದ ಹೂವಿನ ಒಣಗಿದ ಗಡ್ಡೆಯನ್ನು ಹಾಕಿಟ್ಟರೆ ಕಾಫಿ ಪುಡಿ ಹೆಪ್ಪುಗಟ್ಟುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read