ಎಲ್ಲರ ಮನೆಯಲ್ಲೂ ಹಿಟ್ಟನ್ನು ಬಳಸುತ್ತಾರೆ. ಹಿಟ್ಟಿನಿಂದ ಚಪಾತಿ, ಪೂರಿ, ಬನ್ಸ್ ಅನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ ಕೆಲವರು ಹಿಟ್ಟನ್ನು ರಾತ್ರಿಯ ವೇಳೆಯೇ ಕಲಸಿ ಇಡುತ್ತಾರೆ. ಆದರೆ ಇದು ಕಪ್ಪಾಗುತ್ತದೆ. ಇದು ಕಪ್ಪಾಗಲು ಹಲವು ಕಾರಣಗಳಿವೆ. ಆದರೆ ಹಿಟ್ಟು ಕಪ್ಪು ಬಣ್ಣಕ್ಕೆ ತಿರುಗದಂತೆ ತಡೆಯಲು ಈ ವಿಧಾನಗಳನ್ನು ಅನುಸರಿಸಿ.
ಹಿಟ್ಟನ್ನು ಕಲಸುವಾಗ ಹೆಚ್ಚು ನೀರನ್ನು ಬೆರೆಸಬೇಡಿ. ಇದರಿಂದ ಹಿಟ್ಟು ಬೇಗ ಕೆಟ್ಟುಹೋಗಿ ಕಪ್ಪಾಗುತ್ತದೆ.
ಹಿಟ್ಟನ್ನು ಕಲಸುವಾಗ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಅಥವಾ ಹಿಟ್ಟಿಗೆ ಕೊನೆಯಲ್ಲಿ ತುಪ್ಪವನ್ನು ಸವರಿ. ಇದರಿಂದ ಹಿಟ್ಟು ನಯವಾಗಿ ಬರುತ್ತದೆ ಮತ್ತು ಕಪ್ಪಾಗುವುದಿಲ್ಲ. ರೊಟ್ಟಿಗಳು ಮೃದುವಾಗುತ್ತದೆ.
ಹಿಟ್ಟನ್ನು ಕಲಸುವಾಗ ಬೆಚ್ಚಗಿರುವ ನೀರು ಅಥವಾ ಹಾಲನ್ನು ಬಳಸಿ. ಇದರಿಂದ ಹಿಟ್ಟು ಕಪ್ಪಾಗುವುದಿಲ್ಲ ಮತ್ತು ಮೃದುವಾಗುತ್ತದೆ.
ಹಿಟ್ಟಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ಹಿಟ್ಟು ಕಪ್ಪಾಗುತ್ತದೆ. ಹಾಗಾಗಿ ಹಿಟ್ಟಿಗೆ ಗಾಳಿಯಾಡದಂತೆ ಸಂಗ್ರಹಿಸಿಡಿ. ಇದರಿಂದ ಅದು ತಾಜಾವಾಗಿರುತ್ತದೆ.