ಇತ್ತೀಚೆಗೆ ಒಬ್ಬರಿಗಿಂತ ಮತ್ತೊಬ್ಬರು ದೊಡ್ಡದಾದ, ಸುಂದರವಾದ ಮನೆಯನ್ನು ನಿರ್ಮಿಸುತ್ತಾರೆ. ಹಾಗಂತ ಕೇವಲ ಇಂಜಿನಿಯರಿಂಗ್ ಪ್ಲಾನ್ ನಲ್ಲಿ ಮನೆಯನ್ನು ನಿರ್ಮಿಸುವುದು ಮಾತ್ರವಲ್ಲ. ಅದಕ್ಕೆ ತಕ್ಕಂತೆ ವಾಸ್ತುವೂ ಇರಬೇಕಾಗುತ್ತದೆ. ಮುಂದೊಂದು ದಿನ ತೊಂದರೆ ಬಂದಲ್ಲಿ ಇಡೀ ಮನೆಯನ್ನೇ ಕೆಡವಬೇಕಾದ ಪರಿಸ್ಥಿತಿಯೂ ಬಂದಿತು. ಹೀಗಾಗಿ ಐಷಾರಾಮಿ ಮನೆ ಕಟ್ಟುವ ಜೊತೆಗೆ ವಾಸ್ತು ಪ್ರಕಾರವಾಗಿ ನಿರ್ಮಾಣವಾಗಬೇಕಾಗುತ್ತದೆ.
ಮನೆ ಬಾಗಿಲು ಯಾವ ದಿಕ್ಕು, ಕೋಣೆಗಳು ಎಲ್ಲಿದ್ದರೆ ಉತ್ತಮ ಎಂದು ನಿರ್ಧರಿಸುವುದು ಮಾತ್ರ ವಾಸ್ತುವಲ್ಲ. ಯಾವ ಜಾಗದಲ್ಲಿ ಯಾವ ಬಣ್ಣವಿದ್ದರೆ ಸೂಕ್ತ ಎಂಬುದನ್ನು ಕೂಡ ವಾಸ್ತು ನಿರ್ಧರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕುಟುಂಬ ಸದಸ್ಯರ ಇಷ್ಟದ ಬಣ್ಣ, ಅಥವಾ ತಮ್ಮ ಮನೆಗೆ ಇಂಥಾ ಬಣ್ಣ ಹಾಕಿದ್ರೆನೇ ನೋಡಲು ಲುಕ್ ಆಗಿ ಕಾಣುತ್ತದೆ ಎಂದು ನಿರ್ಧರಿಸಿ, ಕಣ್ಣಿಗೆ ಅಂದವಾಗಿ ಕಾಣೋ ಪೇಂಟಿಂಗ್ಸ್ ಮಾಡುತ್ತಾರೆ. ಅಲ್ಲದೆ, ದೊಡ್ಡ ಮೊತ್ತದ, ನೋಡಲು ಚಂದ ಎಂದೆನಿಸುವ ಪೀಠೋಪಕರಣಗಳನ್ನು ತಂದು ಮನೆಯಲ್ಲಿಡುತ್ತಾರೆ. ಆದರೆ, ಈ ರೀತಿ ಮಾಡುವುದು ಸರಿಯಲ್ಲ ಅಂತಾ ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕಿನಲ್ಲಿ ನಿರ್ದಿಷ್ಟವಾದ ಬಣ್ಣಗಳಿದ್ದರೆ ನಿಮಗೆ ಶುಭ ದಕ್ಕಲಿದೆ.
ಹಾಗಾದರೆ ಸಾಮಾನ್ಯವಾಗಿ ಬಹುತೇಕರು ಇಷ್ಟಪಡುವ ಕಪ್ಪು ಬಣ್ಣವನ್ನು ಮಾತ್ರ ಮನೆಗೆ ಪೇಂಟಿಂಗ್ ಮಾಡಲು ಇಷ್ಟಪಡುವುದಿಲ್ಲ. ಅನೇಕರು ಈ ಬಣ್ಣವನ್ನು ಅಶುಭ ಎಂದು ಕರೆದರೂ ಸಹ ವಾಸ್ತು ಶಾಸ್ತ್ರದಲ್ಲಿ ಕಪ್ಪು ಬಣ್ಣಕ್ಕೆ ಕೂಡ ಮಹತ್ವವಿದೆ. ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಕಪ್ಪು ಬಣ್ಣ ನಿಮ್ಮ ಮನೆಯ ಯಾವ ದಿಕ್ಕಿನಲ್ಲಿದ್ರೆ ಸೂಕ್ತ ಎಂಬುದು ನಿಮಗೆ ತಿಳಿದಿದೆಯೇ..?
ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು ಬಣ್ಣವನ್ನು ನೀವು ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಹಾಕಬೇಕು. ನೀವು ಕಪ್ಪು ಬಣ್ಣದ ನಾಯಿಯನ್ನು ಹೊಂದಿದ್ದರೆ ಶ್ವಾನದ ಗೂಡನ್ನು ಉತ್ತರ ದಿಕ್ಕಿನಲ್ಲಿಯೇ ನಿರ್ಮಾಣ ಮಾಡಬಹುದು. ಇಲ್ಲವಾದಲ್ಲಿ ಕಪ್ಪು ಬಣ್ಣದ ಯಾವುದೇ ಪೀಠೋಪಕರಣಗಳನ್ನು ನೀವು ಉತ್ತರ ದಿಕ್ಕಿನಲ್ಲಿ ಇಡಬಹುದು.
ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಬಣ್ಣದ ಯಾವುದೇ ವಸ್ತುಗಳು ಇಲ್ಲವಾದಲ್ಲಿ, ನೀವು ಉತ್ತರ ದಿಕ್ಕಿನಲ್ಲಿ ಕಪ್ಪು ಬಣ್ಣದಲ್ಲಿ ಗೋಡೆಯ ಮೇಲೆ ಪೇಯಿಂಟ್ ಡಿಸೈನ್ ಮಾಡಿಸಬಹುದು. ಇದರಿಂದ ನಿಮ್ಮ ಮನೆಗೆ ಶುಭವಾಗಲಿದೆ. ಕಪ್ಪು ಬಣ್ಣ ನೀರಿಗೆ ಸಂಬಂಧಿಸಿದ್ದಾಗಿದ್ದು, ನೀರಿನ ದಿಕ್ಕು ಉತ್ತರ. ಹೀಗಾಗಿ ನೀವು ನೀರು ತುಂಬಿದ ಯಾವುದೇ ಪಾತ್ರೆ ಅಥವಾ ಅಲಂಕಾರಿಕ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬಹುದು.