ತೂಕ ಇಳಿಸಿಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ. ವ್ಯಾಯಾಮ, ಡಯೆಟ್ ಸೇರಿದಂತೆ ಏನೇ ಮಾಡಿದ್ರೂ ತೂಕ ಮಾತ್ರ ಇಳಿಯುವುದಿಲ್ಲ. ಫಿಟ್ ಎಂಡ್ ಹೆಲ್ದಿ ಶರೀರ ಅವರ ಪಾಲಿಗೆ ಕನಸಾಗೇ ಉಳಿಯುತ್ತದೆ. ಇದಕ್ಕೆ ಕಾರಣ ಅವರು ಅಳವಡಿಸಿಕೊಂಡಿರುವ ತಪ್ಪಾದ ವಿಧಾನ.
ತೂಕ ಇಳಿಸಲು ಹೆಚ್ಚಿನವರು ವ್ಯಾಯಾಮದ ಮೊರೆ ಹೊಗುತ್ತಾರೆ. ಪ್ರತಿ ದಿನವೂ ವ್ಯಾಯಾಮ ಮಾಡಿ ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ವ್ಯಾಯಾಮ ಮಾಡುವವರು ಎಷ್ಟು ಅವಶ್ಯಕವೋ ಅಷ್ಟು ವ್ಯಾಯಾಮ ಮಾಡಬೇಕು. ವ್ಯಾಯಾಮ ಹೆಚ್ಚಾದಲ್ಲಿ ಸ್ಟ್ರೆಸ್ ಹೆಚ್ಚುತ್ತದೆ ಹಾಗೆ ವ್ಯಾಯಾಮ ಕಡಿಮೆಯಾದಲ್ಲಿ ಸ್ನಾಯುಗಳಲ್ಲಿ ಮತ್ತು ಚಯಾಪಚಯ ಕ್ರಿಯೆಯಲ್ಲಿ ತೊಂದರೆಯಾಗಬಹುದು.
ನೀವು ತೂಕ ಇಳಿಸಲು ಬಯಸುವುದಾದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶ ಇರುವುದು ತುಂಬ ಮುಖ್ಯ. ಪ್ರೋಟೀನ್ ಸೇವನೆಯಿಂದ ಮಾಂಸಖಂಡಗಳು ಗಟ್ಟಿಯಾಗುತ್ತವೆ. ಹಾಗಾಗಿ ನಿಮ್ಮ ಡಯೆಟ್ ನಲ್ಲಿ ಪ್ರೋಟೀನ್ ಯುಕ್ತ ಫುಡ್ ಸೇವನೆ ಮಾಡಿ.
ಕೆಲವರು ತೂಕ ಇಳಿಸುವುದರ ಜೊತೆಗೆ ತಮಗೆ ಬೇಕಾದ ತಿಂಡಿಗಳನ್ನು ಕೂಡ ತಿನ್ನುತ್ತಾರೆ. ಹೀಗೆ ತಿನ್ನುವವರು ಆ ಪ್ರೊಡಕ್ಟ್ ನ ಲೇಬಲ್ ನೋಡುವುದು ಒಳ್ಳೆಯದು. ಅದರಿಂದ ಅವರು ತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲೊರಿಯಿದೆ, ಅದು ಆರೋಗ್ಯಕ್ಕೆ ಎಷ್ಟು ಒಳ್ಳೆಯದೆಂಬುದು ಅವರಿಗೆ ತಿಳಿಯುತ್ತದೆ. ಲೇಬಲ್ ನೋಡುವುದರಿಂದ ಕ್ಯಾಲೊರಿಯ ಹೊರತಾಗಿ ಸೇಫ್ಟಿ ಸ್ಟ್ಯಾಂಡರ್ಡ್, ಅದರಲ್ಲಿರುವ ಸಾಮಗ್ರಿ ಮತ್ತು ನ್ಯೂಟ್ರಿಶನ್ ಕುರಿತು ಕೂಡ ತಿಳಿದುಕೊಳ್ಳಬಹುದು.
ತೂಕ ಇಳಿಕೆಯಲ್ಲಿ ನಿಮ್ಮ ದಿನಚರಿ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಒಮ್ಮೆ ನೀವು ತಡರಾತ್ರಿ ಮಲಗಿ ತಡವಾಗಿ ಎದ್ದರೆ, ಅದು ನಿಮ್ಮ ತೂಕ ಏರುಪೇರಾಗುವಂತೆ ಮಾಡುತ್ತದೆ. ಬೆಳಿಗ್ಗೆ ಬೇಗ ಎದ್ದು ನಿಮ್ಮ ದಿನಚರಿಯನ್ನು ಹೊಂದಿಸಿಕೊಂಡು ಅದನ್ನು ನಿಯಮಿತವಾಗಿ ಪಾಲಿಸಿದರೆ ಅದರಿಂದ ನಿಮ್ಮ ಶರೀರ ಫಿಟ್ ಆಗಿರುತ್ತದೆ.