ನಿಮ್ಮ ಮನೆ ಹಾಗೂ ಕೊಠಡಿ ಗಬ್ಬು ವಾಸನೆ ಹೊಡೆಯುತ್ತಿದೆಯೇ? ಪ್ರತಿಬಾರಿ ಅದಕ್ಕಾಗಿ ರೂಮ್ ಫ್ರೆಶ್ನರ್ ತರಬೇಕಿಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಈ ನಾತವನ್ನು ದೂರ ಮಾಡಬಹುದು.
ಮನೆಯೊಳಗೆ ಬ್ಯಾಕ್ಟೀರಿಯಗಳು ಸೇರಿಕೊಂಡಾಗ, ಒದ್ದೆ ಬಟ್ಟೆ ಅಥವಾ ಕಾರ್ಪೆಟ್ ಗಳು ಇದ್ದಾಗ ಹೀಗೆ ಮನೆ ಗಬ್ಬುವಾಸನೆ ಬರುವುದುಂಟು. ಅದರ ನಿವಾರಣೆಗೆ ನೀವು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸುವಂತೆ ಮಾಡಿ. ಮಳೆಗಾಲವಾದರೆ ಹೊರಗಿನ ಗಾಳಿಯಾದರು ಒಳ ಬರಲಿ.
ವಾಸನೆ ಬರುವ ಕೊಠಡಿಯಲ್ಲಿ ಒಂದು ಸಣ್ಣ ತಟ್ಟೆಗೆ ಕರ್ಪೂರದ ಹೊಗೆ ಹಾಕಿ. ಇದರ ವಾಸನೆಗೆ ಶಿಲೀಂದ್ರ ನಾಶವಾಗುತ್ತದೆ.
ವಾಸನೆ ಬರುವ ಕೊಠಡಿಯ ಮೂಲೆಯಲ್ಲಿ ಬಿಳಿ ವಿನೆಗರ್ ನ ನೀರನ್ನು ಸ್ಪ್ರೇ ಮಾಡುವುದರಿಂದಲೂ ಈ ವಾಸನೆಯನ್ನು ದೂರ ಮಾಡಬಹುದು. ಮನೆಯ ಮೂಲೆಯಲ್ಲಿ ಇಲ್ಲವೇ ಕಪಾಟಿನ ಬಳಿ ಬೇವಿನ ಎಲೆಗಳನ್ನು ಗೆಲ್ಲು ಸಮೇತ ನೀಡುವುದರಿಂದಲೂ ದುರ್ಗಂಧ ದೂರವಾಗುತ್ತದೆ.