500ಗ್ರಾಂ ಎಲೆಕೋಸು, 2 ಚಮಚ ಉಪ್ಪು, 1 ಮೊಟ್ಟೆ, ½ ಕಪ್ ಕಾರ್ನ್ ಫ್ಲೋರ್, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ನೀರು, ಎಣ್ಣೆ, 2 ಕಪ್ ಈರುಳ್ಳಿ, 2 ಚಮಚ ಹಸಿರು ಮೆಣಸಿನ ಕಾಯಿ, 1 ಚಮಚ ಸೋಯಾ ಸಾಸ್, 2 ಚಮಚ ವಿನೆಗರ್, ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ :
ಕಾರ್ನ್ ಫ್ಲೋರ್, ಮೊಟ್ಟೆ, ಬೆಳ್ಳುಳ್ಳಿ, ಶುಂಠಿ ಮತ್ತು ಉಪ್ಪು, ಅಗತ್ಯವಿರುವಷ್ಟು ನೀರನ್ನು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಎಲೆಕೋಸನ್ನು ತುಂಡುಗಳಾಗಿ ಕತ್ತರಿಸಿ ಹಾಕಿ ಚೆನ್ನಾಗಿ ಕಲಸಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಎಲೆಕೋಸನ್ನು ಹಾಕಿ ಬ್ರೌನ್ ಕಲರ್ ಬರುವವರೆಗೂ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
ನಂತರ ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಹುರಿಯಿರಿ. ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಬೇಯಿಸಿ. ನಂತರ ಅದಕ್ಕೆ ಉಪ್ಪು, ವಿನೆಗರ್, ಫ್ರೈ ಮಾಡಿದ ಎಲೆಕೋಸ್ ಮತ್ತು ಸೋಯಾ ಸಾಸ್ ಸೇರಿಸಿ 2 ನಿಮಿಷ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.