ಬೊಕ್ರೊಲಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ. ಇದು ನಿಮ್ಮ ದೇಹದ ಮೂಳೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ರೋಗದ ವಿರುದ್ಧ ಹೋರಾಡಲು ಅನುಕೂಲಕಾರಿ.
ಬೆಳ್ಳುಳ್ಳಿ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹಾಗೂ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಮೀನೆಣ್ಣೆ ಕೂಡ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಇದು ದೇಹಕ್ಕೆ ಅವಶ್ಯವಾದ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡುವಲ್ಲಿ ಸಹಕಾರಿ. ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಕೂಡ ಮೀನೆಣ್ಣೆ ಉತ್ತಮ ಪ್ರಯೋಜನ ನೀಡಬಲ್ಲದು. ಮೀನೆಣ್ಣೆಯಲ್ಲಿ ಒಮೆಗಾ 3 ಅಗಾಧ ಪ್ರಮಾಣದಲ್ಲಿದೆ.
ಡ್ರೈಫ್ರೂಟ್ಸ್ಗಳು ತೂಕ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿರೋದ್ರಿಂದ ನೀವು ಇದನ್ನು ಸ್ನ್ಯಾಕ್ ರೂಪದಲ್ಲಿ ಸೇವನೆ ಮಾಡಬಹುದು. ಡ್ರೈಫ್ರೂಟ್ಸ್ಗಳಲ್ಲಿ ಪ್ರೋಟಿನ್ ಅಧಿಕ ಪ್ರಮಾಣದಲ್ಲಿದೆ.
ಆರ್ಯುವೇದದಲ್ಲಿ ಜೇನುತುಪ್ಪ ತುಂಬಾನೇ ಮಹತ್ವವಿದೆ. ಕಳೆದ 5000 ವರ್ಷಗಳಿಂದಲೂ ಔಷಧಿಯ ರೂಪದಲ್ಲಿ ಜೇನುತುಪ್ಪ ಬಳಕೆ ಮಾಡಲಾಗುತ್ತಿದೆ. ಅನೇಕ ಸಮಸ್ಯೆಗಳಿಗೆ ಜೇನುತುಪ್ಪ ರಾಮಬಾಣವಾಗಿದೆ.
ಆಂಟಿಸೆಪ್ಟಿಕ್, ಆಂಟಿಆಕ್ಸಿಡಂಟ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಈ ಜೇನುತುಪ್ಪದಲ್ಲಿದೆ. ಅನೇಕರು ಸೌಂದರ್ಯವರ್ಧಕವಾಗಿ ಬಳಕೆ ಮಾಡುತ್ತಾರೆ.
ಚಿಯಾ ಬೀಜಗಳು ಅಗಾಧ ಪ್ರಮಾಣದಲ್ಲಿ ಫೈಬರ್, ಒಮೆಗಾ 3 ಫ್ಯಾಟಿ ಆ್ಯಸಿಡ್ ಹಾಗೂ ಮ್ಯಾಗ್ನೆಷಿಯಂ ಇದೆ. ಚಿಯಾ ಬೀಜಗಳನ್ನು ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಎನಿಸಲಿದೆ. ಹಾಗೂ ಕೇಶವರ್ಧನೆಗೂ ಸಹಕಾರಿ.