ಬೀಟ್ ರೋಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಕಬ್ಬಿಣ, ರಂಜಕ ಮುಂತಾದ ಪೋಷಕಾಂಶಗಳಿವೆ. ಹಾಗಾಗಿ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ನಿವಾರಿಸಲು ನೀವು ಬೀಟ್ ರೋಟ್ ಅನ್ನು ಬಳಸಬಹುದು.
ತುಟಿಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕಪ್ಪು ತುಟಿಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಟಿಗಳು ಸಾಮಾನ್ಯವಾಗಿ ತೇವಾಂಶ ಕಳೆದುಕೊಂಡು ಕಪ್ಪಾಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಬೀಟ್ ರೋಟ್ ಅನ್ನು ಬಳಸಿ. ಬೀಟ್ ರೋಟ್ ರಸಕ್ಕೆ ಗ್ಲಿಸರಿನ್ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ.
ʼಒಮಿಕ್ರಾನ್ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ
ಬೀಟ್ ರೋಟ್ ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಬೀಟ್ ರೋಟ್ ರಸಕ್ಕೆ ಗೋರಂಟಿ ಮತ್ತು ಆಮ್ಲಾದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ಹಾಗೇ ಬೀಟ್ ರೋಟ್ ರಸಕ್ಕೆ ನಿಂಬೆ ರಸ, 2 ಚಮಚ ಮೊಸರು, ಮೆಂತ್ಯ ಮತ್ತು ನೆಲ್ಲಿಕಾಯಿಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.
ಚರ್ಮದಲ್ಲಿರುವ ಕಪ್ಪು ಕಲೆ, ಟ್ಯಾನಿಂಗ್ ಅನ್ನು ತೆಗೆದುಹಾಕಿ ಚರ್ಮದ ಹೊಳಪು ಹೆಚ್ಚಿಸಲು ಬೀಟ್ ರೋಟ್ ಪೇಸ್ಟ್ ಗೆ 3 ಚಮಚ ಮೊಸರು, 1 ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ಹಚ್ಚಿ.