ಮನೆ ನಿರ್ಮಾಣಕ್ಕೆ ಭೂಮಿ ಖರೀದಿ ಮಾಡುವವರು ವಾಸ್ತು ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವಾಸ್ತು ತಪ್ಪಾದಲ್ಲಿ ಜೀವನ ಪೂರ್ತಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನೆಮ್ಮದಿ ಜೀವನಕ್ಕೆ ಮನೆಯೊಂದೇ ಅಲ್ಲ ಭೂಮಿಯ ವಾಸ್ತು ಕೂಡ ಮಹತ್ವ ಪಡೆಯುತ್ತದೆ.
ಭೂಮಿ ಖರೀದಿ ಮಾಡುವಾಗ ಮಣ್ಣಿನ ಬಗ್ಗೆ ಗಮನವಿಡಿ. ನಯವಾದ ಮಣ್ಣಿರುವ ಭೂಮಿಯನ್ನು ಖರೀದಿ ಮಾಡಿ.
ಮಣ್ಣಿನ ಬಣ್ಣ ಬಿಳಿ ಹಾಗೂ ಹಳದಿಯಾಗಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಕೆಂಪು ಬಣ್ಣದ ಮಣ್ಣು ಮಧ್ಯಮವಾಗಿದ್ದು, ಕಪ್ಪು ಮಣ್ಣಿನ ಭೂಮಿಯಲ್ಲಿ ಯಾವುದೇ ಮನೆ ಅಥವಾ ಕಚೇರಿಯನ್ನು ನಿರ್ಮಾಣ ಮಾಡಬಾರದು.
ಮಣ್ಣನ್ನು ಅಗೆದಾಗ ಮೂಳೆ ಅಥವಾ ಬಟ್ಟೆ ಸಿಕ್ಕರೆ ಆ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದು ಶುಭವಲ್ಲ.
ಮೊದಲು ಚಿತಾಗಾರವಾಗಿದ್ದ ಭೂಮಿಯನ್ನು ಖರೀದಿ ಮಾಡಬೇಡಿ.
ದೊಡ್ಡ ದೊಡ್ಡ ಕಲ್ಲಿರುವ, ಇಳಿಜಾರಿನ, ಪರ್ವತದ ಭೂಮಿ ಖರೀದಿ ಮಾಡಿ ಮನೆ ನಿರ್ಮಾಣ ಮಾಡಬೇಡಿ.