ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಪೊಟಾಶಿಯಂ ಮತ್ತು ಫೈಬರ್ ಅಂಶವನ್ನು ಹೊಂದಿರುವ ಬಾಳೆಹಣ್ಣನ್ನು ಯಾವಾಗ ತಿನ್ನಬೇಕು ಯಾವಾಗ ತಿನ್ನಬಾರದು ಎಂಬುದು ಗೊತ್ತಿರಬೇಕು.
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವುದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮಲಬದ್ಧತೆಯ ತೊಂದರೆಯೂ ನಿವಾರಣೆಯಾಗುತ್ತದೆ. ಮಲಬದ್ಧತೆ ಸಮಸ್ಯೆಯಿರುವವರು ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವನೆ ಮಾಡಬೇಕು.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಎ ಮತ್ತು ಸಿ ಇಮ್ಯೂನ್ ಸಿಸ್ಟಮ್ ಅನ್ನು ಬಲಗೊಳಿಸುತ್ತದೆ. ಬಾಳೆಹಣ್ಣು ಪೊಟಾಶಿಯಂನಿಂದ ಸಮೃದ್ಧವಾಗಿದೆ. ಇದು ನಮ್ಮ ದೇಹದ ಸಕ್ಕರೆಯ ಪ್ರಮಾಣವನ್ನು ಸಮ ಸ್ಥಿತಿಯಲ್ಲಿಡುತ್ತದೆ.
ಮದುವೆಯಾದ ನಾಲ್ಕೇ ದಿನಕ್ಕೆ ಶವವಾದ ನವ ವಿವಾಹಿತೆ….!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ನಮ್ಮ ಶಕ್ತಿ ಹೆಚ್ಚುತ್ತದೆ. ಇದು ಬೇಗನೆ ನಮ್ಮ ಹೊಟ್ಟೆಗೆ ಸೇರಿ ಸಣ್ಣ ಕರುಳಿಗೆ ಹೆಚ್ಚಿನ ಪೋಷಕಾಂಶಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಸೆರೊಟೊನಿನ್ ಅನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ಮ್ಯಾಂಗನೀಸ್ ಗುಣ ನಿದ್ರಾಹೀನತೆಯನ್ನೂ ದೂರಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವುದರಿಂದ ಕೆಲ ನಷ್ಟವಿದೆ. ಬಾಳೆಹಣ್ಣಿನಲ್ಲಿ ಶೇಕಡಾ 25ರಷ್ಟು ಸಕ್ಕರೆ ಅಂಶಗಳಿವೆ. ಬಾಳೆಹಣ್ಣು ಒಮ್ಮೆ ನಿಮಗೆ ಶಕ್ತಿ ನೀಡಿದರೂ ಸ್ವಲ್ಪ ಸಮಯದ ಬಳಿಕ ಮತ್ತೆ ದಣಿವಾದ ಅನುಭವವಾಗುತ್ತದೆ. ಬಾಳೆಹಣ್ಣು ತಿಂದ ಮೇಲೆ ಹಸಿವು ಹೆಚ್ಚುತ್ತದೆ. ಹಾಗಾಗಿ ಈ ಎಲ್ಲ ಲಾಭ, ನಷ್ಟಗಳನ್ನು ನೋಡಿ, ನಿಮ್ಮ ದೇಹಕ್ಕೆ ತಕ್ಕಂತೆ ಬಾಳೆ ಹಣ್ಣು ಸೇವನೆ ಮಾಡುವುದು ಒಳ್ಳೆಯದು.