ಈ ವ್ಯವಹಾರದಲ್ಲಿ ಒಮ್ಮೆ ಹೂಡಿಕೆ ಮಾಡಿ ಜೀವನ ಪೂರ್ತಿ ಗಳಿಸಿ

ವ್ಯವಹಾರ ಮಾಡುವಾಗ ಆಲೋಚನೆ ಮಾಡಿ, ವ್ಯಾಪಾರ ಶುರು ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಪ್ರತಿಯೊಬ್ಬರೂ ಬಯಸ್ತಾರೆ. ನೀವೂ ವ್ಯವಹಾರದ ಬಗ್ಗೆ ಆಲೋಚನೆ ಮಾಡ್ತಿದ್ದರೆ ಟೆಂಟ್ ಹೌಸ್ ಬ್ಯುಸಿನೆಸ್ ಶುರು ಮಾಡಬಹುದು.

ಹಳ್ಳಿಯಿಂದ ಹಿಡಿದು ನಗರ, ಪಟ್ಟಣ, ಮೆಟ್ರೋ ಸಿಟಿ ಹೀಗೆ ಎಲ್ಲಿ ಬೇಕಾದರೂ ಇದನ್ನು ಆರಂಭಿಸಬಹುದು. ಒಮ್ಮೆ ಹಣ ಹೂಡಿ, ಜೀವನ ಪೂರ್ತಿ ಗಳಿಸುವ ವ್ಯವಹಾರದಲ್ಲಿ ಇದು ಒಂದು.

ಟೆಂಟ್ ಹೌಸ್ ನ್ನು ಹೆಚ್ಚಾಗಿ ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ. ಮೊದಲು ಇದು ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ. ಈಗ ಹಳ್ಳಿಯಲ್ಲೂ ಟೆಂಟ್ ಪ್ರಸಿದ್ಧಿ ಪಡೆಯುತ್ತಿದೆ.

ಟೆಂಟ್ ಹೌಸ್ ವ್ಯವಹಾರವನ್ನು ಪ್ರಾರಂಭಿಸಲು, ಟೆಂಟ್‌ಗಳಿಗೆ ಸಂಬಂಧಿಸಿದ ಅನೇಕ ವಸ್ತುಗಳು ಬೇಕಾಗುತ್ತವೆ. ಮರದ ಕಂಬಗಳು ಅಥವಾ ಬಿದಿರು, ಕಬ್ಬಿಣದ ಪೈಪ್‌, ಅತಿಥಿಗಳಿಗೆ ಆಸನ, ಕುರ್ಚಿ, ಕಂಬಳಿ, ಲೈಟ್, ಫ್ಯಾನ್, ಹಾಸಿಗೆ, ಅತಿಥಿಗಳ ಆಹಾರ ಮತ್ತು ಪಾನೀಯ ವ್ಯವಸ್ಥೆ, ಅಡುಗೆ ಗ್ಯಾಸ್, ಪಾತ್ರೆ ಸೇರಿದಂತೆ ಅನೇಕ ವಸ್ತುಗಳು ಬೇಕು.

ಟೆಂಟ್ ಹೌಸ್ ವ್ಯವಹಾರವನ್ನು ನೀವು ಚಿಕ್ಕದಾಗಿ ಶುರು ಮಾಡಬಹುದು. 1 ಲಕ್ಷದಿಂದ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿಯೂ ವ್ಯವಹಾರ ಶುರು ಮಾಡಬಹುದು. ಗಳಿಕೆ ಪ್ರದೇಶವನ್ನು ಅವಲಂಬಿಸಿರುತ್ತದೆ. ಹೆಚ್ಚು ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ತಿಂಗಳಿಗೆ 25,000-30,000 ರೂಪಾಯಿ ಗಳಿಸಬಹುದು. ಮದುವೆ ಸಂದರ್ಭದಲ್ಲಿ 1 ಲಕ್ಷ ರೂಪಾಯಿವರೆಗೆ ಗಳಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read