
ಪೂಜೆ ಮಾಡುವಾಗ ಗಂಟೆ ಬಾರಿಸಲಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ಭಕ್ತರು ಗಂಟೆ ಬಾರಿಸುತ್ತಾರೆ. ಗಂಟೆ ಬಾರಿಸುವುದ್ರ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ.
ಗಂಟೆ ಬಾರಿಸಿದಾಗ ಅದು ಧ್ವನಿಯ ಜೊತೆಗೆ ದೊಡ್ಡ ಕಂಪನವನ್ನು ಉಂಟು ಮಾಡುತ್ತದೆ. ಈ ಕಂಪನಗಳು ನಮ್ಮ ಸುತ್ತಲೂ ಬಹಳ ದೂರ ಹೋಗುತ್ತವೆ. ಇದರ ಪ್ರಯೋಜನವೆಂದರೆ ಅನೇಕ ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಸುತ್ತಲಿನ ಪರಿಸರವು ಶುದ್ಧವಾಗುತ್ತದೆ. ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಅತ್ಯಂತ ಪರಿಶುದ್ಧ ಮತ್ತು ಪವಿತ್ರವಾಗಿರುತ್ತದೆ.
ಧಾರ್ಮಿಕ ಕಾರಣವೆಂದ್ರೆ, ದೇವಾಲಯವನ್ನು ಪ್ರವೇಶಿಸಿದಾಗ, ದೇವಾಲಯದಲ್ಲಿರುವ ದೇವರ ಅನುಮತಿಯನ್ನು ಪಡೆಯಲು ಅಥವಾ ಅವನ ಗಮನವನ್ನು ಸೆಳೆಯಲು ಗಂಟೆಯನ್ನು ಬಾರಿಸಲಾಗುತ್ತದೆ. ಹಲವು ಬಾರಿ ದೇವಸ್ಥಾನದ ದೇವತೆಗಳು ಸುಪ್ತ ಸ್ಥಿತಿಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮೊದಲು ಗಂಟೆ ಬಾರಿಸಿ ಅವರನ್ನು ಎಬ್ಬಿಸಿ ನಂತರ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ದೇವತೆಗಳ ಸಂತೋಷಕ್ಕಾಗಿ ಗಂಟೆಯೂ ಮೊಳಗುತ್ತದೆ.
ದೇವತೆಗಳು ಗಂಟೆಯ ಶಬ್ದದಿಂದ ಸಂತುಷ್ಟರಾಗಿ ಭಕ್ತರ ಮೇಲೆ ಆಶೀರ್ವಾದ ನೀಡುತ್ತಾರೆ ಎಂದು ನಂಬಲಾಗಿದೆ. ಗಂಟೆಯ ಕೆಳಗೆ ಸ್ವಲ್ಪ ಸಮಯ ನಿಂತು ಗಂಟೆಯ ಶಬ್ಧವನ್ನು ಆನಂದಿಸಬೇಕು. ಗಂಟೆ ಶಬ್ಧದಿಂದ ಚಿಂತೆ ದೂರವಾಗಿ, ಮನಸ್ಸು ಪ್ರಶಾಂತವಾಗುತ್ತದೆ. ಗಂಟೆಯ ಶಬ್ದವು ಸಂತೋಷಕ್ಕೆ ಕಾರಣವಾಗುತ್ತದೆ.