ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗುವುದು ಸಾಮಾನ್ಯ. ಆಗಾಗ್ಗೆ ತಲೆನೋವು ಬರ್ತಿರುವ ಬಗ್ಗೆಯೂ ಕೆಲ ಮಕ್ಕಳು ಹೇಳ್ತಿರುತ್ತಾರೆ. ಕೆಲವೊಮ್ಮೆ ಪಾಲಕರು ಇದ್ರ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಟಿವಿ, ಮೊಬೈಲ್ ವೀಕ್ಷಣೆ ಇದಕ್ಕೆ ಮುಖ್ಯ ಕಾರಣ. ಮಕ್ಕಳಿಗೆ ಅಪರೂಪಕ್ಕೆ ತಲೆನೋವು ಬರುವುದು ಸಾಮಾನ್ಯ. ಪದೇ ಪದೇ ತಲೆನೋವು ಬರ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಮೈಗ್ರೇನ್ ನಿಂದಾಗಿ ಮಕ್ಕಳಿಗೆ ಆಗಾಗ ತಲೆನೋವು ಕಾಡಬಹುದು. ಅರ್ಧ ತಲೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ತಲೆತಿರುಗುವಿಕೆ, ವಾಂತಿ ಕಾಣಿಸಿಕೊಳ್ಳುತ್ತದೆ.
ಒತ್ತಡದಿಂದಾಗಿಯೂ ತಲೆನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಗಾಯ ಅಥವಾ ದೀರ್ಘ ಕಾಲ ಔಷಧಿ ತೆಗೆದುಕೊಳ್ಳುವುದ್ರಿಂದಲೂ ತಲೆನೋವು ಬರುತ್ತದೆ. ಸಾಮಾನ್ಯ ನೆಗಡಿ, ಕೆಮ್ಮು ಕೂಡ ಮಗುವಿನ ಈ ಸಮಸ್ಯೆಗೆ ಕಾರಣವಾಗಬಹುದು. ಮೆದುಳಿನ ಗೆಡ್ಡೆ, ಬಾವು ಮತ್ತು ಮೆದುಳಿನಲ್ಲಿ ರಕ್ತಸ್ರಾವದಂತಹ ಗಂಭೀರ ಕಾರಣಗಳಿಂದಾಗಿಯೂ ತಲೆನೋವು ಬರುತ್ತದೆ.
ಅತಿಯಾದ ಬೆವರು, ದೃಷ್ಟಿಸಮಸ್ಯೆ ಕೂಡ ತಲೆ ನೋವಿನ ಲಕ್ಷಣವಾಗಿರುತ್ತದೆ. ತಲೆತಿರುಗುವಿಕೆ, ವಾಂತಿ, ವಾಕರಿಕೆ, ಉದ್ವಿಗ್ನತೆ, ನಿಶಕ್ತಿ ಎಲ್ಲವೂ ಕಾಣಿಸಿಕೊಳ್ಳುತ್ತದೆ.
ಮಗುವಿನಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ, ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಸೂಕ್ತ ಪರೀಕ್ಷೆ ಮಾಡಿ ವೈದ್ಯರು ಔಷಧಿ ನೀಡುತ್ತಾರೆ.
ಇದಲ್ಲದೆ, ಮನೆಯ ವಾತಾವರಣದಲ್ಲಿ ಬದಲಾವಣೆ ತರಬೇಕು. ಒತ್ತಡ ಕಡಿಮೆ ಮಾಡಬೇಕು. ತಲೆ ನೋವಿನ ಜಾಗಕ್ಕೆ ಐಸ್ ಹಚ್ಚಬೇಕು. ಮಕ್ಕಳಿಗೆ ಸರಿಯಾಗಿ ನಿದ್ರೆ ಮಾಡಿಸಬೇಕು. ಮಗುವಿಗೆ ಪೌಷ್ಟಿಕ ಆಹಾರ ನೀಡಬೇಕು. ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಗಾಗ ಜ್ಯೂಸ್ ನೀಡುತ್ತಿರಬೇಕು. ಯೋಗ ತಲೆನೋವಿಗೆ ಒಳ್ಳೆಯದ ಮದ್ದು. ಪ್ರತಿ ದಿನ ಯೋಗ, ವ್ಯಾಯಾಮ ಮಾಡಿಸಬೇಕು.