
ದೇಹದಲ್ಲಿ ಕಿಡ್ನಿಗೆ ಅದರದ್ದೇ ಆದ ಮಹತ್ವವಿದೆ. ಇದು ರಕ್ತವನ್ನು ಸಂಸ್ಕರಿಸುತ್ತದೆ, ವ್ಯರ್ಥವನ್ನು ಹೊರಗೆ ಹಾಕುತ್ತದೆ, ದೇಹದಲ್ಲಿ ದ್ರವ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ಹೀಗೆ ದೇಹದ ಅನೇಕ ಕೆಲಸಗಳನ್ನು ಈ ಕಿಡ್ನಿಗಳೇ ನಿಭಾಯಿಸುತ್ತವೆ. ನಮ್ಮ ದೇಹದ ರಕ್ತವು ಒಂದು ದಿನದಲ್ಲಿ 40 ಬಾರಿ ಕಿಡ್ನಿಯ ಮೂಲಕ ಸಾಗುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
ಕಿಡ್ನಿಯ ಆರೋಗ್ಯಕ್ಕೆ ಘಾಸಿ ಉಂಟು ಮಾಡಬಲ್ಲ ಸಾಮಾನ್ಯ ಅಭ್ಯಾಸಗಳು :
ಪೇನ್ಕಿಲ್ಲರ್ಗಳ ಸೇವನೆ : ಪೇನ್ ಕಿಲ್ಲರ್ಗಳನ್ನು ಸೇವನೆ ಮಾಡೋದ್ರಿಂದ ನಿಮಗೆ ನೋವಿನಿಂದ ಮುಕ್ತಿ ಸಿಗಬಹುದು. ಆದರೆ ಇದು ನಿಮ್ಮ ಕಿಡ್ನಿಯ ಆರೋಗ್ಯವನ್ನು ಹಾಳು ಮಾಡುತ್ತವೆ. ಅತಿಯಾದ ನೋವು ನಿವಾರಕ ಮಾತ್ರೆಗಳ ಸೇವನೆಯು ನಿಮ್ಮ ಮೂತ್ರಪಿಂಡಗಳನ್ನು ಸಂಪೂರ್ಣವಾಗಿ ಹಾಳು ಮಾಡಿಬಿಡಬಹುದು.
ಅತಿಯಾದ ಉಪ್ಪು : ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳು ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮ ಬೀರುವುದು ಮಾತ್ರವಲ್ಲದೇ ನಿಮ್ಮ ಕಿಡ್ನಿಯ ಆರೋಗ್ಯವನ್ನೂ ಹಾಳು ಮಾಡಿಬಿಡಬಹುದು. ಹೀಗಾಗಿ ಅತಿಯಾದ ಉಪ್ಪಿನ ಸೇವನೆ ಒಳ್ಳೆಯದಲ್ಲ.
ಜಂಕ್ಫುಡ್ಗಳ ಸೇವನೆ : ಜಂಕ್ಫುಡ್ಗಳನ್ನು ಸೋಡಿಯಂ ಹಾಗೂ ಪಾಸ್ಪರಸ್ ಅಂಶ ಅತಿಯಾಗಿ ಇರುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಆಹಾರಗಳಿಂದ ನೀವು ದೂರವೇ ಇರಬೇಕು.
ನೀರು ಸೇವನೆ ಮಾಡದೇ ಇರೋದು : ಸದಾ ನೀರು ಕುಡಿಯುತ್ತಲೇ ಇದ್ದರೆ ನಿಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳು ಬೇಗನೆ ದೇಹದಿಂದ ಹೊರ ಹೋಗುತ್ತವೆ. ಅಲ್ಲದೇ ಕಿಡ್ನಿಯಲ್ಲಿ ಕಲ್ಲು ಕೂಡ ಉಂಟಾಗುವುದಿಲ್ಲ. ಹೀಗಾಗಿ ದಿನಕ್ಕೆ 3-4 ಲೀಟರ್ ನೀರನ್ನು ಸೇವನೆ ಮಾಡಬೇಕು.
ನಿದ್ರಾಹೀನತೆ : ಉತ್ತಮ ಆರೋಗ್ಯಕ್ಕೆ ನಿದ್ರೆ ಕೂಡ ತುಂಬಾನೇ ಮುಖ್ಯ. ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವಲ್ಲಿ ನಿದ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಿಡ್ನಿಯನ್ನು ಸಮತೋಲನದಲ್ಲಿಡಲು ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ.
ಅತಿಯಾದ ಸಕ್ಕರೆ ಸೇವನೆ : ಸಕ್ಕರೆಯನ್ನು ಸೈಲೆಂಟ್ ಕಿಲ್ಲರ್ ಎಂದು ಹೇಳಿದ್ರೆ ತಪ್ಪಾಗುವುದಿಲ್ಲ. ಅತಿಯಾದ ಸಕ್ಕರೆ ಸೇವನೆಯು ಮಧುಮೇಹ, ಅಧಿಕ ರಕ್ತದೊತ್ತಡದ ಜೊತೆಯಲ್ಲಿ ಕಿಡ್ನಿಯ ಆರೋಗ್ಯವನ್ನೂ ಹಾಳುಗೆಡವುತ್ತದೆ.
ಧೂಮಪಾನ : ಧೂಮಪಾನದಿಂದ ದೇಹದ ಯಾವುದೇ ಅಂಗಕ್ಕೂ ಲಾಭವಿಲ್ಲ. ಧೂಮಪಾನಿಗಳ ಮೂತ್ರದಲ್ಲಿ ಪ್ರೋಟಿನ್ ಅಂಶ ಇರುತ್ತದೆ. ಇದು ಕಿಡ್ನಿಯು ಹಾಳಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಮದ್ಯಪಾನ : ಮದ್ಯಪಾನವು ಕೂಡ ಧೂಮಪಾನದಂತೆಯೇ ಆರೋಗ್ಯಕ್ಕೆ ಮಾರಕ. ಇದರಿಂದ ಕಿಡ್ನಿಯಲ್ಲಿ ಕಾಯಿಲೆಗಳು ಉಂಟಾಗಬಹುದು.