ವಯಸ್ಸಾದಂತೆ, ದೇಹದ ಅಗತ್ಯಗಳೂ ಹೆಚ್ಚಾಗುತ್ತವೆ. ವೈದ್ಯರು ಮತ್ತು ಪೌಷ್ಟಿಕ ತಜ್ಞರ ಪ್ರಕಾರ, ಮಹಿಳೆಯರು 30 ವರ್ಷದ ನಂತರ ಕೆಲವು ಪೂರಕಗಳನ್ನು ತೆಗೆದುಕೊಳ್ಳಬೇಕು. ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಲು ಸಮತೋಲಿತ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ದೇಹದ ಅಗತ್ಯಗಳೂ ಹೆಚ್ಚಾಗುತ್ತವೆ.
ದೇಹದ ಕೋಶಗಳ ಬೆಳವಣಿಗೆಗೆ ಫೋಲಿಕ್ ಆಮ್ಲ ಬಹಳ ಮುಖ್ಯ. ಆಹಾರದಲ್ಲಿ ಬಿ ವಿಟಮಿನ್ ಫೋಲೇಟ್ ಪ್ರಮಾಣವನ್ನು ಹೆಚ್ಚಿಸುವುದು ಮುಖ್ಯ.
30 ನೇ ವಯಸ್ಸಿನಲ್ಲಿ ಕಬ್ಬಿಣಾಂಶ ಸಹ ದೇಹಕ್ಕೆ ಅಗತ್ಯವಾದ ಖನಿಜವಾಗಿದೆ. ಮಹಿಳೆಯರು ಕಬ್ಬಿಣದ ಕೊರತೆಗೆ ಹೆಚ್ಚು ಒಳಗಾಗುತ್ತಾರೆ. ಕಬ್ಬಿಣದ ಕೊರತೆಯಿಂದಾಗಿ ದೇಹ ಆಯಾಸಗೊಳ್ಳುತ್ತದೆ. ಅನೇಕ ಸೋಂಕಿಗೆ ದೇಹ ಸುಲಭವಾಗಿ ಒಳಗಾಗುತ್ತದೆ. ಹಾಗಾಗಿ ಕಬ್ಬಿಣದ ಅಂಶ ದೇಹ ಸೇರುವಂತೆ ನೋಡಿಕೊಳ್ಳಬೇಕು.
ವಿಟಮಿನ್ ಡಿ ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೃದಯದ ಕಾಯಿಲೆಗಳನ್ನು ತಡೆಯುತ್ತದೆ. ಮತ್ತು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. 30 ವರ್ಷದ ನಂತರ ವಿಟಮಿನ್ ಡಿ ಪೂರಕವನ್ನು ತೆಗೆದುಕೊಳ್ಳಬಹುದು.
ಮೆಗ್ನೀಸಿಯಮ್ ದೇಹಕ್ಕೆ ಬಹಳ ಮುಖ್ಯ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿರಿಸುತ್ತದೆ. ಮೆಗ್ನೀಸಿಯಮ್ ಕೊರತೆಯಿರುವ ಮಹಿಳೆಯರು ಸ್ನಾಯು ಸೆಳೆತ, ಆಯಾಸ, ಮಾನಸಿಕ ಗೊಂದಲ, ಅಧಿಕ ರಕ್ತದೊತ್ತಡ, ಅನಿಯಮಿತ ಹೃದಯ ಬಡಿತ, ವಾಕರಿಕೆ ಮತ್ತು ಸ್ನಾಯು ದೌರ್ಬಲ್ಯವನ್ನು ಅನುಭವಿಸುತ್ತಾರೆ.
ಯಾವುದೇ ಪೂರಕ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಭೇಟಿಯಾಗಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ, ಔಷಧಿ ಸೇವನೆ ಮಾಡಬಾರದು.