alex Certify ʼಹಬ್ಬದ ಋತುʼವಿನಲ್ಲಿ ದೇಹ‌ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಬ್ಬದ ಋತುʼವಿನಲ್ಲಿ ದೇಹ‌ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹಬ್ಬದ ಮಾಸದಲ್ಲಿ ಥರಾವರಿ ತಿಂಡಿಗಳನ್ನು ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಇದೇ ಆತುರದಲ್ಲಿ ನಿಮ್ಮ ಆರೋಗ್ಯದ ಮೇಲೂ ಕಳಕಳಿ ಇರಲಿ ಎಂದಿರುವ ಜೀವನಶೈಲಿ ಸಲಹೆಗಾರ್ತಿ “ಸಮತೋಲಿತ ಪಥ್ಯ ಹಾಗೂ ಜೀವನ ಶೈಲಿ ನಿಮ್ಮ ಮೆಚ್ಚಿನ ಹಬ್ಬಗಳ ಆಚರಣೆಯ ವಿಚಾರದಲ್ಲಿ ರಾಜಿಯಾಗಲು ಬಿಡುವುದಿಲ್ಲ. ನಿಶ್ಚಿಂತೆಯಿಂದ ಹಬ್ಬಗಳನ್ನು ಆಚರಿಸಲು ಇಲ್ಲೊಂದಿಷ್ಟು ಸಲಹೆಗಳಿವೆ” ಎಂದಿದ್ದು ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ:

1. ಸೇವಿಸುವ ಆಹಾರದ ಪ್ರಮಾಣಗಳ ಮೇಲೆ ನಿಗಾ ಇರಲಿ.

2. ಚೆನ್ನಾಗಿ ನೀರು ಕುಡಿಯುತ್ತಿರಿ.

3. ನಿಮ್ಮ ಊಟ ತಪ್ಪಿಸಿಕೊಳ್ಳಬೇಡಿ.

4. ಬೆಳಗ್ಗೆ ವೇಳೆ ನೀರಿನಲ್ಲಿ ಮೆಂತ್ಯ ಬೆರೆಸಿ ಕುಡಿದಲ್ಲಿ ಸ್ವಾಭಾವಿಕ ನಾರಿನಂಶ ಹೆಚ್ಚಾಗಿ ನಿಮ್ಮ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.

5. ಮನೆಯಲ್ಲೇ ತಯಾರಿಸಿದ ಸಿಹಿ ತಿನಿಸುಗಳನ್ನು ಸೇವಿಸಿ.

6. ಮದ್ಯಪಾನದ ಸೇವನೆ ಮೇಲೆ ನಿಯಂತ್ರಣವಿರಲಿ.

7. ಭಾರೀ ಭೋಜನಗಳಿರುವ ಔಟಿಂಗ್‌ಗಳನ್ನು ಆದಷ್ಟು ಕಡಿಮೆ ಮಾಡಿ.

8. ಸಿಹಿ ತಿನಿಸುಗಳ ಮೇಲೆ ಬಯಕೆ ಕಡಿಮೆ ಮಾಡಲು ಊಟದ ಬಳಿಕ ಅರ್ಧ ಚಮಚೆಯಷ್ಟು ಸೋಂಪು, ಬೆಲ್ಲ ಹಾಗೂ ತುಪ್ಪ ಸೇವಿಸಿ.

9. ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ.

10. ನಮ್ಮ ದೇಹದಲ್ಲಿ ಶ್ವಾಸಕೋಶಗಳು, ಚರ್ಮ ಹಾಗೂ ಕಿಡ್ನಿಗಳು ನಾವು ಸೇವಿಸುವ ಆಹಾರದಲ್ಲಿರುವ ನಂಜಿನಂಶಗಳನ್ನು ತೆಗೆದು ಹಾಕುವ ಕಾರಣ, ಅತಿಯಾದ ವ್ಯಾಯಾಮ ಮಾಡಲು ಹೋಗದೇ, ಚೆನ್ನಾಗಿ ತಿಂದು ತೇಗಿದ ಮಾರನೇ ದಿನ ನಿಮ್ಮ ದಿನಚರಿಯನ್ನು ಸಹಜವಾಗಿ ಆರಂಭಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...