ಮನೆ ಮುಂದೆ ಈ ಗಿಡ ನೆಟ್ಟು ‘ಅದೃಷ್ಟ’ ಬದಲಾಯಿಸಿಕೊಳ್ಳಿ

ವಾಸ್ತು, ಜೀವನದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖ, ಸಂತೋಷ, ಸಮೃದ್ಧಿ, ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ವಾಸ್ತು ಬಹಳ ಮುಖ್ಯ.

ಮನೆಯ ಸುತ್ತಮುತ್ತ ಇರುವ ಕೆಲ ಗಿಡಗಳು ಧನಾತ್ಮಕ ಶಕ್ತಿ ಪ್ರವೇಶ ಮಾಡಲು ನೆರವಾಗುತ್ತವೆ. ಹಾಗಾಗಿ ಮನೆ ಸುತ್ತಮುತ್ತ ಇಂತ ಗಿಡಗಳನ್ನು ನೆಟ್ಟು ಹೊಸ ವರ್ಷವನ್ನು ಮಂಗಳಕರವಾಗಿ ಶುರುಮಾಡಿ.

ಮದುವೆಗೆ ತಡೆಯುಂಟಾಗುತ್ತಿದ್ದರೆ, ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕೆಂದಾದಲ್ಲಿ ಮನೆಯ ಹಿಂದಿನ ಭಾಗದಲ್ಲಿ ಬಾಳೆ ಸಸಿಯನ್ನು ನೆಡಿ.

ತುಳಸಿ ಸಸ್ಯ ಪವಿತ್ರವಾದದ್ದು. ಇದ್ರಲ್ಲಿ ಔಷಧಿ ಗುಣವಿರುತ್ತದೆ. ಮನೆಯ ಮುಂದೆ ತುಳಸಿ ಸಸಿ ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.

ಮನೆಯಲ್ಲಿ ದಾಳಿಂಬೆ ಸಸಿ ನೆಡುವುದರಿಂದ ರಾಹು, ಕೇತುವಿನ ನಕಾರಾತ್ಮಕ ಶಕ್ತಿ ಹಾಗೂ ತಂತ್ರ-ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ.

ಮನೆ ಬಳಿ ಶಮಿ ಗಿಡ ನೆಡುವುದರಿಂದ ಶನಿ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು. ಪ್ರತಿದಿನ ಇದಕ್ಕೆ ಪೂಜೆ ಮಾಡಬೇಕು.

ದಾಸವಾಳದ ಗಿಡ ಸೂರ್ಯ ಹಾಗೂ ಮಂಗಳ ಗ್ರಹಕ್ಕೆ ಸಂಬಂಧವಿರುತ್ತದೆ. ಹನುಮಂತನಿಗೆ ದಾಸವಾಳದ ಹೂ ಅರ್ಪಣೆ ಮಾಡುವುದರಿಂದ ಮಂಗಳ ಗ್ರಹ ಪ್ರಸನ್ನಗೊಳ್ಳುತ್ತದೆ. ಪ್ರತಿದಿನ ಪೂಜೆ ಮಾಡುವುದರಿಂದ ಕುಟುಂಬದ ವೃದ್ಧಿಯಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read