ತೂಕ ನಷ್ಟಕ್ಕೆ ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ದೇಹದ ತೂಕ ಕಡಿಮೆ ಮಾಡಲು ಬಹಳಷ್ಟು ಮಂದಿ ಸಾಕಷ್ಟು ಶ್ರಮ ವಹಿಸುತ್ತಾರೆ. ದಿನನಿತ್ಯ ವ್ಯಾಯಾಮ, ಡಯೆಟ್ ಕೂಡ ಮಾಡುತ್ತಾರೆ. ಇದರ ಜೊತೆಗೆ ತೂಕ ಇಳಿಕೆ ಮಾಡಲು ಡಿಟಾಕ್ಸ್ ವಾಟರ್ ಗಳು ಸಹ ಸಹಾಯಕವಾಗಬಲ್ಲದು ಎಂಬುದು ನಿಮಗೆ ತಿಳಿದಿದೆಯಾ..?

ಡಿಟಾಕ್ಸ್ ನೀರು ನಮ್ಮ ದೇಹವನ್ನು ಜೀವಾಣುಗಳಿಂದ ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಕೂಡ ಇವು ಸಹಾಯ ಮಾಡುತ್ತದೆ. ದಿನನಿತ್ಯದ ಪದಾರ್ಥಗಳೊಂದಿಗೆ ಈ ಪಾನೀಯಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ತೂಕ ನಷ್ಟಕ್ಕೆ ಈ ಬೆಲ್ಲ ಮತ್ತು ನಿಂಬೆ ಬೆರೆಸಿದ ನೀರನ್ನು ಪ್ರಯತ್ನಿಸಿ..

ನಿಂಬೆ ವಿಟಮಿನ್ ಸಿ ಯ ಒಂದು ಮೂಲವಾಗಿದೆ. ಈ ಅಂಶವು ಹೈಡ್ರೇಶನ್, ಚರ್ಮದ ಗುಣಮಟ್ಟ, ಜೀರ್ಣಕ್ರಿಯೆ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇದು ತೂಕ ನಷ್ಟ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ.
ಸಿಹಿತಿಂಡಿಗಳನ್ನು ತಯಾರಿಸಲು ಸಾಮಾನ್ಯವಾಗಿ ಬಳಸುವ ಬೆಲ್ಲ ಕೂಡ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಬೆಲ್ಲವು ಜೀರ್ಣಕ್ರಿಯೆಯ ಸುಧಾರಣೆ, ದೇಹದ ಶುದ್ಧೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಆದುದರಿಂದ ತೂಕ ನಷ್ಟಕ್ಕೆ ಬೆಲ್ಲ ಮತ್ತು ನಿಂಬೆ ನೀರನ್ನು ಪ್ರಯತ್ನಿಸುವುದು ಅತ್ಯಗತ್ಯ.

ನಿಂಬೆ-ಬೆಲ್ಲದ ಪಾನಕ ಮಾಡುವುದು ಹೇಗೆ?:

ಮೊದಲು ಒಂದು ಸಣ್ಣ ತುಂಡು ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ತಣ್ಣಗಾಗಲು ಬಿಡಿ. ಈಗ ಬೆಲ್ಲದ ನೀರಿಗೆ ಒಂದು ಚಮಚ ನಿಂಬೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ನೀವು ಪ್ರತಿದಿನ ಬೆಳಿಗ್ಗೆ ಈ ಪಾನೀಯವನ್ನು ಸೇವಿಸಬಹುದು. ಇದು ನಿಮ್ಮ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read