ದೇಹದ ಇತರ ಅಂಗದ ಜೊತೆ ಬಾಯಿ ಸ್ವಚ್ಛತೆ ಕೂಡ ಬಹಳ ಮುಖ್ಯ. ಬಾಯಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದ್ರೆ ಕೆಲ ಸಮಸ್ಯೆ ಎದುರಾಗುತ್ತದೆ. ಹಲ್ಲು ನೋವು, ಒಸಡು ಬಾವು, ಬಾಯಿ ವಾಸನೆ ಹೀಗೆ ಅನೇಕ ಸಮಸ್ಯೆ ಕಾಡುತ್ತದೆ. ಅನೇಕರು ಬ್ರೆಷ್ ಮಾಡುವ ಜೊತೆಗೆ ಮೌತ್ ವಾಶ್ ಬಳಸ್ತಾರೆ. ಅತಿಯಾದ ಮೌತ್ ವಾಶ್ ಬಳಕೆ ಕೂಡ ಒಳ್ಳೆಯದಲ್ಲ. ಇದ್ರ ಅತಿಯಾದ ಬಳಕೆ ಅಡ್ಡಪರಿಣಾಮವುಂಟು ಮಾಡುತ್ತದೆ.
ಮೌತ್ ವಾಶ್ ನಲ್ಲಿ ಆಲ್ಕೋಹಾಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುತ್ತವೆ. ಮೌತ್ ವಾಶ್, ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತವೆ. ಆದ್ರೆ ಅತಿಯಾದ ಪ್ರಮಾಣದಲ್ಲಿ ಮೌತ್ ವಾಶ್ ಬಳಕೆಯಿಂದ ಸೂಕ್ಷ್ಮ ಅಂಗಾಂಶಕ್ಕೆ ಹಾನಿಯಾಗುತ್ತದೆ. ಬಾಯಿ ಹುಣ್ಣಿಗೂ ಇದು ಕಾರಣವಾಗುತ್ತದೆ.
ಆಲ್ಕೋಹಾಲ್ ಆಧಾರಿತ ಮೌತ್ ವಾಶ್ ಮಕ್ಕಳಿಗೆ ನೀಡಬಾರದು. ಇದ್ರಲ್ಲಿರುವ ಆಲ್ಕೋಹಾಲ್, ಮಕ್ಕಳ ಸೂಕ್ಷ್ಮ ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಆಲ್ಕೋಹಾಲ್ ಆಧಾರಿತ ಮೌತ್ ವಾಶ್ ಹೆಚ್ಚಾಗಿ ಬಳಸುವುದರಿಂದ ಬಾಯಿ ಒಣಗುವ ಸಾಧ್ಯತೆಯಿದೆ. ಆಕಸ್ಮಿಕವಾಗಿ ಮೌತ್ ವಾಶ್ ನುಂಗಿದರೆ, ಅದು ಇತರ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಸಹಜ ಹೃದಯ ಬಡಿತ, ತಲೆತಿರುಗುವಿಕೆ, ಹೊಟ್ಟೆ ನೋವು ಸಮಸ್ಯೆ ಕಾಡುತ್ತದೆ.