ನವ ವಿವಾಹಿತರ ಹನಿಮೂನ್ ಗೆ ಕೊರೊನಾ ಅಡ್ಡಿಯಾಗಿದೆ. ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದ್ದ ಕೆಲ ನವ ಜೋಡಿ, ಭಾರತದ ಯಾವ ಜಾಗ ಬೆಸ್ಟ್ ಎಂಬ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿ ಮಾತ್ರವಲ್ಲ, ಭಾರತದಲ್ಲೂ ಹನಿಮೂನ್ ಗೆ ಸಾಕಷ್ಟು ಸುಂದರ ತಾಣವಿದೆ. ಪ್ರಣಯದ ಸುಖವನ್ನು ಹೆಚ್ಚಿಸುತ್ತವೆ.
ಊಟಿ : ಹನಿಮೂನ್ ಗೆ ಮೊದಲು ನೆನಪಾಗುವುದು ಊಟಿ. ಅಕ್ಟೋಬರ್ ನಿಂದ ಜನವರಿ ನಡುವೆ ಇಲ್ಲಿಗೆ ಭೇಟಿ ನೀಡಬಹುದು. ಇಬ್ಬರಿಗೆ ಸರಾಸರಿ 25 ಸಾವಿರದಿಂದ 40 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಕೊಯಮತ್ತೂರಿನವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು. ರೈಲಿನಲ್ಲಿ ಪ್ರಯಾಣ ಬೆಳೆಸುವವರು ಮೆಟ್ಟುಪಾಳ್ಯಂವರೆಗೆ ಹೋಗಬಹುದು. ಊಟಿಯಲ್ಲಿ ಸಾಕಷ್ಟು ಸುಂದರ ಸ್ಥಳಗಳು ಕಣ್ಮನ ಸೆಳೆಯುತ್ತವೆ.
ಮುನ್ನಾರ್ : ಊಟಿಯಂತೆ ಮುನ್ನಾರ್ ಕೂಡ ಪ್ರಸಿದ್ಧಿ ಪಡೆದಿದೆ. ಸೆಪ್ಟೆಂಬರ್ ನಿಂದ ಫೆಬ್ರವರಿ, ಮುನ್ನಾರ್ ಗೆ ಪ್ರಯಾಣ ಬೆಳೆಸಲು ಬೆಸ್ಟ್ ಸಮಯ. ಇಬ್ಬರಿಗೆ 35ರಿಂದ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಅನಮುಡಿ ಪರ್ವತ, ಹಿನ್ನೀರು ಸೇರಿದಂತೆ ಇಲ್ಲೂ ಅನೇಕ ಸುಂದರ ಸ್ಥಳಗಳಿವೆ.
ಡಾರ್ಜಿಲಿಂಗ್ : ಹನಿಮೂನ್ ಗೆ ಡಾರ್ಜಿಲಿಂಗ್ ಗೆ ಹೋಗುವ ಪ್ಲಾನ್ ಮಾಡಿದ್ದರೆ ಅಕ್ಟೋಬರ್ ನಲ್ಲಿ ಪ್ಲಾನ್ ಮಾಡಿ. ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಪ್ರಯಾಣ ಬೆಳೆಸಬಹುದು. ಇಬ್ಬರಿಗೆ ಸರಾಸರಿ ವೆಚ್ಚ 30,000 ದಿಂದ 50,000 ರೂಪಾಯಿ. ಟಾಯ್ ಟ್ರೈನ್ ಪ್ರಯಾಣ ಇಲ್ಲಿನ ವಿಶೇಷ ಆಕರ್ಷಣೆ.
ಕುಲ್ಲು ಮನಾಲಿ : ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಕುಲ್ಲು-ಮನಾಲಿಗೆ ಪ್ರಯಾಣ ಬೆಳೆಸಬಹುದು. ಇಬ್ಬರಿಗೆ ಸರಾಸರಿ ವೆಚ್ಚ 20 ಸಾವಿರ ರೂಪಾಯಿಯಿಂದ 35 ಸಾವಿರ ರೂಪಾಯಿ ಬರುತ್ತದೆ. ಕುಲ್ಲು-ಮನಾಲಿಗೆ ಹೋಗಲು ಬಯಸಿದರೆ ಬಸ್ಸಿನಲ್ಲಿ ಹೋಗಬಹುದು.
ಅಂಡಮಾನ್ –ನಿಕೋಬಾರ್: ಆಗಸ್ಟ್ ನಿಂದ ಮಾರ್ಚ್ ಮಧ್ಯೆ ಇಲ್ಲಿಗೆ ಪ್ರಯಾಣ ಬೆಳೆಸಬಹುದು. ಇಬ್ಬರಿಗೆ ಸರಾಸರಿ ವೆಚ್ಚ 40 ಸಾವಿರ ರೂಪಾಯಿಯಿಂದ 80 ಸಾವಿರ ರೂಪಾಯಿ ಬರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮುಖ್ಯ ಆಕರ್ಷಣೆಗಳೆಂದರೆ ರಾಸ್ ದ್ವೀಪ, ವೈಪರ್ ದ್ವೀಪ, ಪೋರ್ಟ್ ಬ್ಲೇರ್, ಎಲಿಫೆಂಟ್ ಬೀಚ್ ಮತ್ತು ನಾರ್ತ್ ಬೇ ಬೀಚ್.
ಕೊಡಗು : ಹನಿಮೂನ್ ಗೆ ಹೇಳಿ ಮಾಡಿಸಿದ ಜಾಗಗಳಲ್ಲಿ ಕೊಡಗು ಕೂಡ ಒಂದು. ಕರ್ನಾಟಕದ ಕಾಶ್ಮೀರವೆಂದು ಇದನ್ನು ಕರೆಯಲಾಗುತ್ತದೆ. ಕಾಫಿ, ಟೀ ತೋಟ, ಹಸಿರು ಕಣಿವೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಐತಿಹಾಸಿಕ ಸ್ಮಾರಕ, ಅರಮನೆ, ಪಾರ್ಕ್, ಅಭಯಾರಣ್ಯ ಹನಿಮೂನ್ ಖುಷಿಯನ್ನು ದುಪ್ಪಟ್ಟುಗೊಳಿಸುತ್ತದೆ. ಕೊಡಗಿನಲ್ಲಿ ಸಾಕಷ್ಟು ವೀಕ್ಷಣೆ ಸ್ಥಳಗಳಿವೆ.
ಇಷ್ಟೇ ಅಲ್ಲ, ಭಾರತದಲ್ಲಿ ಸಾಕಷ್ಟು ಸುಂದರ ಸ್ಥಳಗಳಿದೆ. ಹನಿಮೂನ್ ಗೆ ವಿದೇಶಕ್ಕೆ ಪ್ರಯಾಣ ಬೆಳೆಸುವ ಬದಲು ಇಲ್ಲಿನ ಸುಂದರ ಪ್ರದೇಶಕ್ಕೆ ಹನಿಮೂನ್ ಗೆ ಹೋಗಬಹುದು.