ಇಂದಿಗೆ ಸರಿಯಾಗಿ 22 ವರ್ಷಗಳ ಹಿಂದೆ ಅಲ್ ಖೈದಾ ಸಂಘಟನೆಯ ಭಯೋತ್ಪಾದಕರು ಅಮೆರಿಕಾದ ಹೆಮ್ಮೆಯ ಸಂಕೇತವಾದ ನ್ಯೂಯಾರ್ಕ್ ನಗರದ ಅವಳಿ ಗೋಪುರಗಳು ಸೇರಿದಂತೆ ನಾಲ್ಕು ಕಡೆ ವಿಮಾನ ದಾಳಿ ನಡೆಸಿದ್ದರು. ಈ ದುರಂತದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಮನುಕುಲದಲ್ಲೇ ಅತ್ಯಂತ ಹೇಯ ಭಯೋತ್ಪಾದಕ ದಾಳಿ ಇದೆಂದು ಹೇಳಲಾಗುತ್ತದೆ.
ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ದಾಳಿಯಂತೂ ಭೀಕರವಾಗಿತ್ತು. ಒಂದು ಕಟ್ಟಡಕ್ಕೆ ವಿಮಾನ ಅಪ್ಪಳಿಸಿದ ಸಂದರ್ಭದಲ್ಲಿ ಜನತೆ ಬೆಚ್ಚಿಬಿದ್ದಿದ್ದರು. ಮೊದಲಿಗೆ ಇದೊಂದು ಆಕಸ್ಮಿಕ ಘಟನೆ ಎಂದು ಭಾವಿಸಲಾಗಿತ್ತಾದರೂ. ಯಾವಾಗ ಸಾಲು ಸಾಲು ದುರಂತಗಳು ಸಂಭವಿಸಿದವೋ ಆಗ ಇದು ಭಯೋತ್ಪಾದಕರ ಕೃತ್ಯವೆಂಬುದು ಮನದಟ್ಟಾಗಿತ್ತು.
ಅಲ್ಲದೇ ಮೊದಲ ಕಟ್ಟಡಕ್ಕೆ ವಿಮಾನ ಅಪ್ಪಳಿಸಿದ ಸ್ವಲ್ಪ ಹೊತ್ತಿನಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡಕ್ಕೂ ಇನ್ನೊಂದು ವಿಮಾನ ಅಪ್ಪಳಿಸಿತ್ತು. ಇದರಿಂದ ಭಯಭೀತಗೊಂಡ ನ್ಯೂಯಾರ್ಕ್ ಜನತೆ ಮುಂದೇನೋ ಎಂಬ ಆತಂಕದಲ್ಲೇ ಕಾಲ ಕಳೆದಿದ್ದರು.
ಈ ಘಟನೆಯ ಬಳಿಕ ಅಮೆರಿಕಾ, 9/11 ದಾಳಿಯ ರೂವಾರಿ ಅಲ್ ಖೈದಾ ಸಂಘಟನೆಯ ಮುಖಂಡ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೊಳಿಸಿತ್ತು. ಮನುಕುಲವೇ ಮರೆಯಲಾಗದ ಆ ದುರಂತದ ಕ್ಷಣಗಳ ಫೋಟೋಗಳು ಇಲ್ಲಿವೆ.