ತಪ್ಪಾದ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳು ಇದ್ರಿಂದ ಶುರುವಾಗುತ್ತವೆ. ಮಲಬದ್ಧತೆಗೂ ಇದೇ ಕಾರಣ. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ 20ರಷ್ಟು ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಮೊಡವೆಗಳು, ಸುಕ್ಕು, ಕಪ್ಪು ಕಲೆಗಳು ಮಲಬದ್ಧತೆಯಿಂದ ಶುರುವಾಗುತ್ತದೆ. ನಿಮಗೂ ಈ ಸಮಸ್ಯೆಯಿದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ. ಕೆಲ ಮನೆ ಮದ್ದಿನ ಮೂಲಕ ನೀವು ಮಲಬದ್ಧತೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಊಟದ ನಂತ್ರ ಕನಿಷ್ಠ 15-20 ನಿಮಿಷ ಬಿಟ್ಟು ನೀವು ಒಂದು ಲೋಟ ನೀರನ್ನು ಕುಡಿಯಬೇಕು. ಹಾಗೆ ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ, ಟೀ, ಕಾಫಿ ಸೇವನೆ ಮಾಡುವ ಮೊದಲು ಒಂದು ಲೋಟ ನೀರು ಸೇವನೆ ಮಾಡಿ.
ಮಧ್ಯಾಹ್ನ ಅಥವಾ ಸಂಜೆ ಒಂದು ಬೌಲ್ ಸಲಾಡ್ ಅವಶ್ಯಕವಾಗಿ ಸೇವನೆ ಮಾಡಿ. ಸಲಾಡ್ ನಲ್ಲಿ ಮೂಲಂಗಿ ಅವಶ್ಯಕವಾಗಿರಲಿ. ಇದು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಪ್ರತಿದಿನ ಕನಿಷ್ಠ 250 ಗ್ರಾಂ ಪಪ್ಪಾಯಿ ಸೇವನೆ ಮಾಡಿ. ಇದು ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಪಪ್ಪಾಯಿ ಹಣ್ಣಿಗೆ ಪೆಪ್ಪರ್ ಪೌಡರ್ ಹಾಕಿ ಸೇವನೆ ಮಾಡಿ.
ಹಸಿ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಿಧಾನವಾಗಿ ಅಗಿದು ಸೇವನೆ ಮಾಡಿ. ಶುಂಠಿ ಚಹಾವನ್ನು ಕೂಡ ಕುಡಿಯಬಹುದು. ಇದು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಒಂದು ಲೋಟ ಬೆಚ್ಚಗಿನ ಹಾಲಿಗೆ 1 ಚಮಚ ತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಅರಿಶಿನವನ್ನು ಹಾಲಿನೊಂದಿಗೆ ಕುಡಿದ್ರೆ ಮಲಬದ್ಧತೆ ಸಮಸ್ಯೆ ನಿವಾರಿಸಬಹುದು.
ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ, ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
6-7 ಒಣದ್ರಾಕ್ಷಿಯನ್ನು ಹಾಲಿನಲ್ಲಿ ಕುದಿಸಿ, ರಾತ್ರಿ ಮಲಗುವ ಮುನ್ನ ಕುಡಿಯಿರಿ.
ಬೆಚ್ಚಗಿನ ಹಾಲಿನಲ್ಲಿ ಅಥವಾ ಉಗುರುಬೆಚ್ಚಗಿನ ನೀರಿಗೆ 1 ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ಕುಡಿಯಬೇಕು. ಊಟದ ನಂತರ ಇದನ್ನು ಸೇವನೆ ಮಾಡಬೇಕು.