ಮನೆ ಅಲಂಕಾರಕ್ಕೆ ಹಾಕುವ ಸುಂದರ ಫೋಟೋದಿಂದ ಹೆಚ್ಚಾಗುತ್ತೆ ಸಕಾರಾತ್ಮಕ ಶಕ್ತಿ

ಛಾಯಾಚಿತ್ರ ಹಾಗೂ ವರ್ಣಚಿತ್ರಗಳು ಮನೆ ಅಲಂಕಾರವನ್ನು ಹೆಚ್ಚಿಸುತ್ತವೆ. ಅಲಂಕಾರಕ್ಕಾಗಿ ನಾವು ಬಳಸುವ ಕೆಲ ಫೋಟೋಗಳು ನಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರತಿಯೊಂದು ಫೋಟೋಕ್ಕೂ ಅದರದೇ ಆದ ಮಹತ್ವವಿರುತ್ತದೆ. ಹಾಗಾಗಿ ಮನೆಗೆ ಫೋಟೋ ಹಾಕುವ ಮೊದಲು ಗಮನ ನೀಡುವುದು ಬಹಳ ಮುಖ್ಯ.

ಮನೆಯ ಆಗ್ನೇಯ ದಿಕ್ಕಿನಲ್ಲಿ ಸುಂದರ ಅಥವಾ ಮಾದರಿ ಫೋಟೋವನ್ನು ಹಾಕಿ. ಇದರಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.

ವೈವಾಹಿಕ ಸಮಸ್ಯೆ ಇರುವವರು ಮನೆಯಲ್ಲಿ ರಾಧಾಕೃಷ್ಣನ ಫೋಟೋವನ್ನು ಹಾಕಿ. ಮಲಗುವ ಕೋಣೆಯಲ್ಲಿ ವಾಯುವ್ಯ ಮೂಲೆಯಲ್ಲಿ ಈ ಫೋಟೋವನ್ನು ಹಾಕುವುದು ಒಳ್ಳೆಯದು.

ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಉತ್ತರ ದಿಕ್ಕಿಗೆ ಕುಬೇರ, ಲಕ್ಷ್ಮಿ ಅಥವಾ ಸೂರ್ಯನ ಫೋಟೋವನ್ನು ಹಾಕಿ.

ಮನೆಯ ನೈರುತ್ಯ ಮೂಲೆಯಲ್ಲಿ ಪ್ರಕೃತಿಗೆ ಸಂಬಂಧಿಸಿದ ಫೋಟೋವನ್ನು ಹಾಕಿ. ಸೂರ್ಯ, ಪರ್ವತ, ಸುಂದರ ಮರ, ನದಿ, ಜಲಪಾತದ ಚಿತ್ರವನ್ನು ಹಾಕಿ.

ಸುಂದರ ಹಾಗೂ ದುಬಾರಿ ಬೆಲೆಯ ಆಭರಣಗಳ ಫೋಟೋಗಳು ಮನೆಯಲ್ಲಿರುವ ಅಮಂಗಲವನ್ನು ಹೋಗಲಾಡಿಸಿ ಮಂಗಲಗೊಳಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read