ಅಡುಗೆ ಮಾಡುವಾಗ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದಾಗಿ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹವನ್ನು ಸೇರುವುದಿಲ್ಲ. ಆಹಾರ ತಯಾರಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು ಪೌಷ್ಠಿಕಾಂಶವಿರುತ್ತದೆ. ಅದರ ಸಿಪ್ಪೆ ತೆಗೆಯುವ ಬದಲು ಸ್ಕ್ರಬ್ ಮಾಡುವುದರಿಂದ ಪೋಷಕಾಂಶಗಳು ನಾಶವಾಗುವುದಿಲ್ಲ. ಹೆಚ್ಚಿನ ತರಕಾರಿಗಳಲ್ಲಿನ ಪೋಷಕಾಂಶಗಳು ಸಿಪ್ಪೆಯಲ್ಲೇ ಕಂಡು ಬರುತ್ತವೆ. ತರಕಾರಿಗಳನ್ನು ಕಡಿಮೆ ನೀರಿನಲ್ಲಿ ಬೇಯಿಸಿ. ಹಾಗೆ ಹೆಚ್ಚು ಹೊತ್ತು ಬೇಯಿಸಬೇಡಿ.
ಅಡುಗೆಗೆ ಕಡಿಮೆ ಎಣ್ಣೆಯನ್ನು ಬಳಸಿ. ಎಣ್ಣೆಯನ್ನು ಅತಿಯಾಗಿ ಬಳಸಿದ್ರೆ ಪೋಷಕಾಂಶದ ನಾಶವಾಗುತ್ತದೆ. ತರಕಾರಿಗಳನ್ನು ಸಾಧ್ಯವಾದಷ್ಟು ಹಬೆಯಲ್ಲಿ ಬೇಯಿಸಬೇಕು. ಚಮಚದಲ್ಲಿ ಎಣ್ಣೆ ಹಾಕುವ ಬದಲು ಸ್ಪ್ರೇ ಬಳಸಿ. ಬಾಣಲೆಯಲ್ಲಿ ತರಕಾರಿಗಳನ್ನು ಹಾಕಿ ಹುರಿಯಿರಿ. ನಂತ್ರ ಎಣ್ಣೆಯನ್ನು ಸಿಂಪಡಿಸಿ. ಇದು ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಆಹಾರದಲ್ಲಿ ಉಪ್ಪಿನ ಅತಿಯಾದ ಬಳಕೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅಡುಗೆ ಮಾಡುವಾಗ ಕಡಿಮೆ ಉಪ್ಪು ಸೇರಿಸಿ. ಆಲಿವ್ ಆಯಿಲ್, ವಿನೆಗರ್ ಅಥವಾ ನಿಂಬೆ ರಸವನ್ನು ಸೇರಿಸಿ. ಇದು ಉಪ್ಪಿನಂತೆಯೇ ರುಚಿಯನ್ನು ಹೆಚ್ಚಿಸುತ್ತದೆ. ಅಡುಗೆಗೆ ತಾಜಾ ತರಕಾರಿಗಳನ್ನು ಮಾತ್ರ ಬಳಸಿ. ಪ್ಯಾಕೆಟ್ ತರಕಾರಿಯಲ್ಲಿ ಉಪ್ಪಿನಂಶ ಹೆಚ್ಚಿರುತ್ತದೆ.
ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ ಮತ್ತು ನಿಂಬೆಹಣ್ಣಿನಂತಹ ಪದಾರ್ಥಗಳು ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಅವುಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿ.