ಮನೆ ಅಂದಮೇಲೆ ಅಲ್ಲಿ ದೇವರ ಕೋಣೆ ಇರೋದು ಸರ್ವೇ ಸಾಮಾನ್ಯ.
ದೇವರ ಕೋಣೆಯಲ್ಲಿ ಕಣ್ಣಿಗೆ ಚಂದ ಎನಿಸುವ ಎಲ್ಲಾ ದೇವರ ಫೋಟೋ ಹಾಗೂ ಮೂರ್ತಿಗಳನ್ನು ಇಟ್ಟು ಬಿಡುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಗೂ ತನ್ನದೇ ಆದ ಕೆಲ ನಿಯಮಾವಳಿಗಳು ಇವೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಇರುವ ಮೂರ್ತಿಯ ಹಿಂಭಾಗವೂ ಕಾಣುವಂತೆ ಎಂದಿಗೂ ವಿಗ್ರಹವನ್ನು ಇಡುವಂತಿಲ್ಲ.
ದೇವರ ಮೂರ್ತಿಯ ಹಿಂಭಾಗವನ್ನು ಶುಭಕರ ಎಂದು ಪರಿಗಣಿಸಲಾಗುವುದಿಲ್ಲ. ದೇವರ ಕೋಣೆಯಲ್ಲಿ 2ಕ್ಕಿಂತ ಹೆಚ್ಚು ಗಣಪತಿಯ ಫೋಟೋ ಅಥವಾ ವಿಗ್ರಹಗಳನ್ನು ಇರಿಸಕೂಡದು. ಇದು ಕೂಡ ವಾಸ್ತುಶಾಸ್ತ್ರದ ಪ್ರಕಾರ ಶುಭಸೂಚಕವಲ್ಲ. ಆದರೆ ಒಂದೇ ದೇವರ ಎರಡು ಬೇರೆ ತರಹನಾದ ಫೋಟೋಗಳು ಮನೆಯ ಬೇರೆ ಬೇರೆ ಕಡೆಗಳಲ್ಲಿ ಇರಬಹುದು.
ಇದನ್ನು ಹೊರತುಪಡಿಸಿ ಯುದ್ಧ ಮಾಡುತ್ತಿರುವ ಅಥವಾ ಕ್ರೋಧದ ಮುಖವನ್ನು ಹೊಂದಿರುವ ದೇವರ ಫೋಟೋ ಅಥವಾ ವಿಗ್ರಹಗಳು ದೇವರ ಕೋಣೆಯಲ್ಲಿ ಇರುವುದು ಶುಭ ಸೂಚಕವಲ್ಲ. ಯಾವಾಗಲು ನಗುಮೊಗದ ದೇವರ ಫೋಟೋಗಳನ್ನೇ ದೇವರ ಕೋಣೆಯಲ್ಲಿಡಿ.