ಅನೇಕ ಕಚೇರಿಗಳಲ್ಲಿ ಶರ್ಟ್-ಪ್ಯಾಂಟ್ ಜೊತೆ ಟೈ ಧರಿಸುವುದನ್ನು ಕಡ್ಡಾಯಗೊಳಿಸಿರುತ್ತಾರೆ. ಹಾಗಾಗಿ ಉದ್ಯೋಗಿಗಳು ಪ್ರತಿ ನಿತ್ಯ ಟೈ ಧರಿಸುತ್ತಾರೆ. ಬಣ್ಣ ಬಣ್ಣದ ಟೈ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ರೆ ಈ ಟೈ ಧರಿಸುವುದು ಆರೋಗ್ಯಕ್ಕೆ ಹಾನಿಕರ ಎಂಬ ಸಂಗತಿ ಹೊರ ಬಿದ್ದಿದೆ.
ಅಧ್ಯಯನವೊಂದರಲ್ಲಿ, ಈ ಬಗ್ಗೆ ಹೇಳಲಾಗಿದೆ. ದೀರ್ಘಕಾಲದವರೆಗೆ ಟೈ ಧರಿಸುವುದ್ರಿಂದ ಮೆದುಳಿಗೆ ರಕ್ತದ ಪೂರೈಕೆಯು ಶೇಕಡಾ 7.5 ರಷ್ಟು ಕಡಿಮೆಯಾಗುತ್ತದೆ. ನಿರಂತರವಾಗಿ ಟೈ ಧರಿಸುವುದ್ರಿಂದ ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಕಣ್ಣಿನ ಪೊರೆ ಮತ್ತು ಗ್ಲುಕೋಮಾ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎನ್ನಲಾಗಿದೆ.
ಅಧ್ಯಯನದಲ್ಲಿ ಟೈ ಧರಿಸುವುದ್ರಿಂದಾಗುವ ಲಾಭ-ನಷ್ಟದ ಬಗ್ಗೆ ಹೇಳಿದ್ದಾರೆ. ಟೈ, ಮೆದುಳಿನಲ್ಲಿ ರಕ್ತದ ಹರಿವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯುವುದು ಸಂಶೋಧನೆಯ ಉದ್ದೇಶವಾಗಿತ್ತು. ಅಧ್ಯಯನದಲ್ಲಿ ಒಟ್ಟು 30 ಪುರುಷರನ್ನು ಆಯ್ಕೆ ಮಾಡಲಾಗಿತ್ತು.
ಇವರಲ್ಲಿ ಹದಿನೈದು ಜನರು ನಿಯಮಿತ ಟೈ ಧರಿಸುತ್ತಿದ್ದರು. 15 ಜನರು ಟೈ ಧರಿಸುತ್ತಿರಲಿಲ್ಲ. ಪ್ರತಿಯೊಬ್ಬರ ಮೆದುಳನ್ನು ಎಂಆರ್‌ಐ ಮೂಲಕ ನಿಯಮಿತವಾಗಿ ಸ್ಕ್ಯಾನ್ ಮಾಡಲಾಗುತ್ತಿತ್ತು. ಇದರಿಂದ ಮೆದುಳಿನಲ್ಲಿ ರಕ್ತದ ಹರಿವನ್ನು ಪತ್ತೆ ಮಾಡಲಾಯ್ತು. ಟೈ ಧರಿಸದವರಿಗೆ ಹೋಲಿಸಿದ್ರೆ, ಟೈ ಧರಿಸುವವರಲ್ಲಿ ಮೆದುಳಿನ ರಕ್ತದ ಹರಿವು ಶೇಕಡಾ 7.5 ಶೇಕಡಾರಷ್ಟು ಕಡಿಮೆಯಿತ್ತು ಎಂದು ಸಂಶೋಧಕರು ಹೇಳಿದ್ದಾರೆ.