ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳು ಕಡಿಯುವುದರಿಂದ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬೇಕು. ಅದಕ್ಕಾಗಿ ಈ ವಿಧಾನಗಳನ್ನು ಅನುಸರಿಸಿ.
ನಿಂಬೆ ಮತ್ತು ಲವಂಗ ಸೊಳ್ಳೆಗಳನ್ನು ಓಡಿಸಲು ಉತ್ತಮ ಮನೆ ಮದ್ದು. ಹಾಗಾಗಿ ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಅದಕ್ಕೆ ಲವಂಗಗಳನ್ನು ಚುಚ್ಚಿ. ಸೊಳ್ಳೆಗಳು ಹೆಚ್ಚಾಗಿರುವ ಮೂಲೆಗಳಲ್ಲಿ ಇರಿಸಿ. ಇದರ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ.
ಕರ್ಪೂರ ಹೊಗೆ ಸೊಳ್ಳೆಗಳು ಸಾಯುತ್ತವೆ. ಹಾಗಾಗಿ ನೀವು ಮಲಗುವ ಕೋಣೆಯಲ್ಲಿ ಕರ್ಪೂರ ಹೊಗೆ ಮಾಡಿ. ಇದರಿಂದ ಸೊಳ್ಳೆಗಳ ಕಾಟ ತಪ್ಪುತ್ತದೆ.
ಬೆಳ್ಳುಳ್ಳಿಯ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ. ಹಾಗಾಗಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಜಜ್ಜಿ ನೀರಿನಲ್ಲಿ ಕುದಿಸಿ ಅದನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಮನೆಯ ಮೂಲೆ ಮೂಲೆಗೂ ಸ್ಪ್ರೇ ಮಾಡಿ. ಇದರಿಂದ ಸೊಳ್ಳೆಗಳು ಶೀಘ್ರದಲ್ಲಿಯೇ ನಿವಾರಣೆಯಾಗುತ್ತದೆ.
ಲವಂಗದೆಲೆಯನ್ನು ಸುಡುವುದರಿಂದ ಕೂಡ ಸೊಳ್ಳೆಗಳನ್ನು ಓಡಿಸಬಹುದು. ಹಾಗಾಗಿ ಕಡಾಯಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ ಅದರ ಮೇಲೆ ಲವಂಗದೆಲೆಗಳನ್ನು ಹಾಕಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಅದರ ಹೊಗೆ ಇಡೀ ಮನೆಯಲ್ಲಿ ಹರಡುವಂತೆ ಮಾಡಿ. ಇದರಿಂದ ಸೊಳ್ಳೆಗಳು ಸಾಯುತ್ತವೆ.