ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸ. ಸಣ್ಣ ಸಣ್ಣ ಕೀಟಗಳು ಆಹಾರ, ಹಣ್ಣಿನ ಮೇಲೆ ಕುಳಿತುಕೊಳ್ಳುತ್ತವೆ. ಇದ್ರಿಂದ ಹಣ್ಣು, ಆಹಾರ ಹಾಳಾಗುವ ಜೊತೆಗೆ ಅನಾರೋಗ್ಯ ಕಾಡುತ್ತದೆ. ಈ ಸಣ್ಣ ಕೀಟಗಳಿಂದ ಆಹಾರವನ್ನು ರಕ್ಷಿಸುವುದು ಬಹಳ ಮುಖ್ಯ.
ಕೊಳಕು ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಹಾಗಾಗಿ ಆಹಾರ, ಹಣ್ಣುಗಳನ್ನು ಸರಿಯಾಗಿ ಮುಚ್ಚಿಡಬೇಕು. ಹಣ್ಣುಗಳು ಕೊಳೆಯದಂತೆ ನೋಡಿಕೊಳ್ಳಬೇಕು. ಹಾಗೆ ಆಹಾರ ಪದಾರ್ಥ, ಹಣ್ಣುಗಳನ್ನು ದೀರ್ಘಕಾಲ ಇಡಬೇಡಿ. ಹಣ್ಣುಗಳನ್ನು ಕತ್ತರಿಸಿದ ಕೆಲ ಸಮಯದಲ್ಲಿಯೇ ಖಾಲಿ ಮಾಡಿ.
ಒಂದು ಪಾತ್ರೆಗೆ ನೀರು ಹಾಕಿ. ಅದಕ್ಕೆ ಒಂದು ಚಮಚ ವಿನೆಗರ್, ಸಕ್ಕರೆ ಹಾಕಿ. ಅದಕ್ಕೆ ಡಿಶ್ ಸೋಪ್ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ ಇಡಿ. ಈ ಕೀಟಗಳು ನೀರಿಗೆ ಆಕರ್ಷಿತವಾಗಿ ಅಲ್ಲಿಗೆ ಬಂದು ನೀರು ಸ್ಪರ್ಶಿಸಿದ್ರೆ ಸಾವನ್ನಪ್ಪುತ್ತವೆ.