alex Certify ʼನಾಗರ ಪಂಚಮಿʼ ಯಂದು ಈ ಉಪಾಯ ಮಾಡಿ ಹಾವಿನಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾಗರ ಪಂಚಮಿʼ ಯಂದು ಈ ಉಪಾಯ ಮಾಡಿ ಹಾವಿನಿಂದ ದೂರವಿರಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ಎಲ್ಲರಿಗೂ ತಿಳಿದಂತೆ ನಾಗ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಹೆಚ್ಚು ಮಳೆಯಾಗುತ್ತದೆ.

ಈ ಕಾರಣದಿಂದಾಗಿ ಹಾವುಗಳು ತಮ್ಮ ಬಿಲದಿಂದ ಹೊರಬರಲು ಪ್ರಾರಂಭಿಸುತ್ತವೆ. ಕೆಲವು ಹಾವುಗಳು ವಿಷಪೂರಿತವಾಗಿದ್ದು, ಅಪಾಯಕಾರಿಯಾಗಿರುತ್ತದೆ. ಹಾವು ಹತ್ತಿರ ಬರಬಾರದೆಂದಾದಲ್ಲಿ ನಾಗರಪಂಚಮಿ ದಿನ ಕೆಲ ನಿಯಮ ಪಾಲನೆ ಮಾಡಬೇಕು.

ಹಿಂದೂ ಧರ್ಮದಲ್ಲಿ ಹಸುಗಳಿಗೆ ವಿಶೇಷ ಮಹತ್ವವಿದೆ. ಹಸುವಿನ ಸಗಣಿಯಿಂದ ಮನೆಯ ಮುಖ್ಯ ದ್ವಾರದ ಎರಡೂ ಕಡೆ ಹಾವಿನ ಚಿತ್ರ ಬಿಡಿಸಿ, ಅದಕ್ಕೆ ಹಸಿ ಹಾಲನ್ನು ಅರ್ಪಿಸಿ.

ನಾಗರ ಪಂಚಮಿಯಂದು ತಾಮ್ರದ ಹಾವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ತಾಮ್ರದ ಹಾವುಗಳನ್ನು ಭಕ್ತಿಯಿಂದ ಪೂಜಿಸಿ, ನಂತ್ರ ಅದನ್ನು ಕಪಾಟಿನಲ್ಲಿಡಿ.

ಇಷ್ಟೇ ಅಲ್ಲದೆ ನಾಗರ ಪಂಚಮಿಯ ದಿನದಂದು ಹಾಲಿನಿಂದ ಶಿವನಿಗೆ ರುದ್ರಾಭಿಷೇಕ ಮಾಡಿ. ಇದ್ರಿಂದ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರುತ್ತದೆ. ಭಗವಂತ ಶಿವನಿಗೆ ಹಸುವಿನ ಹಾಲಿನ ಅಭಿಷೇಕ ಮಾಡಿ.

ಯಾವುದೇ ಕಾರ್ಯದಲ್ಲಿ ಪದೇ ಪದೇ ಅಡ್ಡಿಯಾಗ್ತಿದ್ದರೆ ಭಗವಂತ ಶಿವನಿಗೆ ಹಸುವಿನ ಮೊಸರಿನಿಂದ ಅಭಿಷೇಕ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...