ಮೇಷ : ಆಂಜನೇಯ ಆರಾಧನೆಯಿಂದ ನಿಮ್ಮ ಮುಂದೆ ಇರುವ ಸವಾಲುಗಳೆಲ್ಲ ಮಂಜಿನಂತೆ ಕರಗಲಿದೆ. ಮಿತ್ರರು ನಿಮ್ಮೆಲ್ಲ ಕಷ್ಟಗಳಿಗೆ ಹೆಗಲು ನೀಡಲಿದ್ದಾರೆ. ಈ ದಿನ ಸಂತಸಮಯವಾಗಿ ಇರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.
ವೃಷಭ : ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ಮನೆಗೆ ಸಂಬಂಧಿಗಳ ಆಗಮನದಿಂದ ನೀವಿಂದು ಸಂತಸದಿಂದ ಇರಲಿದ್ದೀರಿ. ಸದ್ಯದಲ್ಲೇ ಶುಭ ಕಾರ್ಯ ಇರೋದ್ರಿಂದ ಅದರ ತಯಾರಿಯಲ್ಲೇ ಮಗ್ನರಾಗಲಿದ್ದೀರಿ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಮಿಥುನ : ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನವಾಗಿದೆ. ಇಂದು ನಿಮ್ಮ ಜೀವನದ ಗತಿಯೇ ವಿಶೇಷ ದಿಕ್ಕಿನಲ್ಲಿ ಸಾಗುವ ಸೂಚನೆ ಸಿಗಲಿದೆ. ವ್ಯಾಪಾರ – ವ್ಯವಹಾರದ ನಿಮಿತ್ತ ದೂರ ಪ್ರಯಣ ಮಾಡಬೇಕಾಗಿ ಬರಬಹುದು. ದಾಂಪತ್ಯ ಜೀವನದಲ್ಲಿ ಕಿರಿಕಿರಿಯಿದೆ.
ಕಟಕ : ನವದಂಪತಿಗೆ ಸಂತಾನ ಭಾಗ್ಯವಿದೆ. ಉದ್ಯಮದಲ್ಲಿರುವ ಅಡೆತಡೆಗಳು ಕುಲದೇವತೆಯ ಆರಾಧನೆಯಿಂದ ದೂರಾಗಲಿದೆ. ಪ್ರೇಮ ವೈಫಲ್ಯದಿಂದ ನೋವನ್ನು ಅನುಭವಿಸಲಿದ್ದೀರಿ. ಹಿರಿಯರ ಆರೋಗ್ಯ ಸುಧಾರಿಸಲಿದೆ. ಉದ್ಯಮದಲ್ಲಿ ಹೂಡಿಕೆಗೆ ಸಕಾಲವಲ್ಲ.
ಸಿಂಹ : ಕುಟುಂಬಸ್ಥರ ಜೊತೆ ಸಂತಸದ ಸಮಯವನ್ನು ಕಳೆಯಲಿದ್ದೀರಿ. ಕೃಷಿಭೂಮಿ ವಿಚಾರವಾಗಿ ವಿವಾದಕ್ಕೀಡಾಗಲಿದ್ದೀರಿ. ಅನವಶ್ಯಕ ಖರ್ಚು ಬೇಡ. ಕುಟುಂಬದ ಗಲಾಟೆಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ.
ಕನ್ಯಾ : ಖರ್ಚು- ವೆಚ್ಚಗಳು ಮಿತಿಮೀರಲಿದೆ. ಹಿತೈಷಿಗಳಿಂದ ಉತ್ತಮ ಸಲಹೆ ಪಡೆಯಲಿದ್ದೀರಿ. ಪಿತ್ರಾರ್ಜಿತ ಆಸ್ತಿಯಲ್ಲಿದ್ದ ಗೊಂದಲವು ದೂರಾಗಲಿದೆ. ಬಂಧುಮಿತ್ರರ ಆಗಮನದಿಂದ ಸಂತಸ ಪಡುತ್ತೀರಿ.
ತುಲಾ : ಬಟ್ಟೆ ವ್ಯಾಪಾರಿಗಳಿಗೆ ಇದು ಅದೃಷ್ಟದ ದಿನವಾಗಿದೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಭಾಗ್ಯವಿದೆ. ಕುಲದೇವತೆ ದೇಗುಲಕ್ಕೆ ಭೇಟಿ ನೀಡಲಿದ್ದೀರಿ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ.
ವೃಶ್ಚಿಕ : ಉದ್ಯಮದಲ್ಲಿ ಪದೇ ಪದೇ ವಿಘ್ನಗಳು ತಲೆದೋರಲಿದೆ. ವಿದ್ಯಾರ್ಥಿಗಳು ಇನ್ನಷ್ಟು ಕಠಿಣ ಪರಿಶ್ರಮ ಪಡಲೇಬೇಕು. ಅಧಿಕ ವೆಚ್ಚ ಭರಿಸುವ ಪ್ರಸಂಗ ಬರಲಿದೆ.
ಧನು : ಮಂಡಿ ನೋವಿನಿಂದ ಬಳಲಲಿದ್ದೀರಿ. ವೈವಾಹಿಕ ಸಂಬಂಧ ಕೂಡಿ ಬರಲಿದೆ. ದಾಂಪತ್ಯ ಜೀವನದಲ್ಲಿ ವಿರಸ ಮೂಡಲಿದೆ. ಅನಿರೀಕ್ಷಿತ ಕಡೆಯಿಂದ ಧನಾಗಮನವಾಗಲಿದೆ. ಮನೆಯ ಸದಸ್ಯರು ಅನಾರೋಗ್ಯಕ್ಕೀಡಾಗಲಿದ್ದಾರೆ.
ಮಕರ : ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಕಂಡುಬರಲಿದೆ. ಮನೆಯಲ್ಲಿರುವ ಅಮೂಲ್ಯ ವಸ್ತುಗಳನ್ನ ಬಳಕೆ ಮಾಡುವ ಮುನ್ನ ಎಚ್ಚರ ಮುಖ್ಯ. ಹಿರಿಯರ ಸಲಹೆ ಪಡೆದುಕೊಳ್ಳಿ.
ಕುಂಭ : ಬಂಧುಗಳ ಆಗಮನದಿಂದ ಸಂತಸದ ವಾತಾವರಣ ಮೂಡಲಿದೆ. ವ್ಯಾಪಾರದಲ್ಲಿ ಆರಂಭದಲ್ಲಿ ನಷ್ಟ ಕಂಡುಬಂದರೂ ಮಧ್ಯಾಹ್ನದ ಬಳಿಕ ಲಾಭ ನಿಮ್ಮದಾಗಲಿದೆ. ಸರ್ಕಾರಿ ಅಧಿಕಾರಿಗಳಿಗೆ ಇದು ಒತ್ತಡದ ದಿನವಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
ಮೀನ : ಸಹೋದ್ಯೋಗಿಗಳ ಅಸಹಕಾರದಿಂದ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಗೃಹ ನಿರ್ಮಾಣ ಕೆಲಸ ಆರಂಭ ಮಾಡಲಿದ್ದೀರಿ. ಸಾಲಗಾರರ ಕಾಟ ನಿಮ್ಮನ್ನು ಕಾಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕೂಡಿಬರಲಿದೆ. ಕೃಷಿ ಕಾರ್ಯಗದಲ್ಲಿ ಪ್ರಗತಿ ಕಾಣುತ್ತೀರಿ.