ಆಲ್ಕೋಹಾಲ್ ಸೇವನೆ ಮಾಡಲು ನಮಗೆ ಇಂಥದ್ದೇ ಕಾರಣ ಬೇಕೆಂದೇನಿಲ್ಲ. ಸಾವಿರಾರು ವರ್ಷಗಳಿಂದ ಮದ್ಯಪಾನವು ಮಾನವರ ಜೀವನದ ಅವಿಭಾಜ್ಯ ಅಂಗವೆಂಬಂತೆ ಆಗಿಬಿಟ್ಟಿದೆ.
ಬಿಯರ್ ಸೇವನೆಗೆ ನೀವು ಹೊಸಬರಾಗಿದ್ದು, ಯಾವ ರೀತಿಯ ಬಿಯರ್ ಆಯ್ದುಕೊಳ್ಳಬೇಕೆಂಬ ಗೊಂದಲ ನಿಮ್ಮಲ್ಲಿದ್ದರೆ – ನಿಮಗಾಗಿ ಇಗೋ ಇಲ್ಲೊಂದು ಸಲಹೆ – ಡಾರ್ಕ್ ಬಿಯರ್. ಲೈಟ್ ಬಿಯರ್‌ಗಿಂತ ಹೆಚ್ಚು ಬಣ್ಣ ಹಾಗೂ ರುಚಿ ಹೊಂದಿರುವ ಡಾರ್ಕ್ ಬಿಯರ್‌ನಲ್ಲಿ ಆರೋಗ್ಯಕ್ಕೆ ಅನುಕೂಲವಾಗುವ ಅನೇಕ ಅಂಶಗಳಿವೆ:
* ಡಾರ್ಕ್ ಬಿಯರ್‌ನಲ್ಲಿ ಫ್ಲಾವನಾಯ್ಡ್‌ಗಳು ಜೋರಾಗಿರುವ ಕಾರಣ ಅದು ನಿಮ್ಮ ಹೃದಯಕ್ಕೆ ಒಳ್ಳೆಯದಿರಬಹುದು.
* ಡಾರ್ಕ್ ಬಿಯರ್‌ನಲ್ಲಿ ಕಬ್ಬಿಣಾಂಶ ಹೆಚ್ಚಿದ್ದು, ರಕ್ತದಲ್ಲಿರುವ ನಿಮ್ಮ ಹಿಮೋಗ್ಲೋಬಿನ್‌ಗೆ ಒಳ್ಳೆಯದು.
* ಬಹಳ ರುಚಿಯಾಗಿರುವ ಕಾರಣ ಡಾರ್ಕ್ ಬಿಯರ್ ಅನ್ನು ನೀವು ಯಾವುದೇ ಸೈಡ್ಸ್ ಇಲ್ಲದೆಯೂ ಸೇವನೆ ಮಾಡಬಹುದಾಗಿದೆ.
* ಡಾರ್ಕ್ ಬಿಯರ್‌ಗೆ ಹಾಕುವ ಪದಾರ್ಥಗಳನ್ನು ಹೆಚ್ಚಾಗಿ ರೋಸ್ಟ್ ಮಾಡುವ ಕಾರಣ ಇನ್ನಷ್ಟು ರುಚಿಯಾಗಿರುತ್ತದೆ.
ಬಿಯರ್ ಹೀರುವುದು ಆರೋಗ್ಯಕ್ಕೆ ಒಳ್ಳೆಯದಾದರೂ, ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ.