ವಯಸ್ಸು ಹೆಚ್ಚಾದಂತೆ ಆರೋಗ್ಯ ಹಾಗೂ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಆರೋಗ್ಯಕರ ಜೀವನ ಶೈಲಿ ದೀರ್ಘಕಾಲದ ಫಿಟ್ನೆಸ್ ಗೆ ಕಾರಣವಾಗುತ್ತದೆ. ಉತ್ತಮ ಆರೋಗ್ಯ, ಫಿಟ್ನೆಸ್ ಗಾಗಿ ಕೆಲವೊಂದು ಸುಲಭ ಮಾರ್ಗ ಅನುಸರಿಸಬಹುದು.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಟೀ ಬದಲು ನೀರು ಕುಡಿಯುವುದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆ ಸುಲಭವಾಗಿ ಇದನ್ನು ರೂಢಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದ ತಕ್ಷಣ ಚಹಾದ ಬದಲು ನೀರು ಕುಡಿಯಬೇಕು. ರಾತ್ರಿ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಚಹಾ ಅಥವಾ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ದೇಹಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಬೆಳಿಗ್ಗೆ ಎದ್ದು ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ, ದೇಹಕ್ಕೆ ಶಕ್ತಿ ಬರುತ್ತದೆ. ಮೆದುಳು ಮತ್ತು ಮೂತ್ರಪಿಂಡಗಳು ಉತ್ತಮವಾಗಿ ಕೆಲಸ ಮಾಡುತ್ತವೆ.
ಬೆಳಿಗ್ಗೆ ಉಪಹಾರದಲ್ಲಿ ಹೆಚ್ಚು ಪ್ರೋಟೀನ್ ಇರುವಂತೆ ನೋಡಿಕೊಳ್ಳಬೇಕು. ದಿನವಿಡೀ ದೇಹ ಶಕ್ತಿಯುತವಾಗಿರಬೇಕೆಂದ್ರೆ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಹೆಚ್ಚಾಗಿ ಸೇವನೆ ಮಾಡಬೇಕು. ಪ್ರೋಟೀನ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ತೂಕವನ್ನು ನಿಯಂತ್ರಿಸಲಾಗುತ್ತದೆ.
ಪ್ರತಿದಿನ ಒಂದು ಹಣ್ಣು ತಿನ್ನಬೇಕು. ಕನಿಷ್ಠ ಒಂದು ಹಣ್ಣನ್ನಾದರೂ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹಣ್ಣಿನ ಸೇವನೆಯಿಂದ ಫೈಬರ್, ವಿಟಮಿನ್, ಖನಿಜ ದೇಹಕ್ಕೆ ಸಿಗುತ್ತದೆ. ಜೀರ್ಣಕ್ರಿಯೆ ಸರಾಗವಾಗುತ್ತದೆ.
ಪ್ರತಿ ದಿನ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಅಧ್ಯಯನದ ಪ್ರಕಾರ, 60 ಮೆಟ್ಟಿಲುಗಳನ್ನು 20 ಸೆಕೆಂಡುಗಳಲ್ಲಿ ದಿನಕ್ಕೆ ಮೂರು ಬಾರಿ ಏರಿದರೆ ಕಾರ್ಡಿಯೋ ಫಿಟ್ನೆಸ್ ಶೇಕಡಾ 5ರಷ್ಟು ಹೆಚ್ಚುತ್ತದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ. ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ದಿನವಿಡೀ ಚಹಾ ಮತ್ತು ಕಾಫಿಯ ಬದಲು ಗ್ರೀನ್ ಟೀ ಕುಡಿಯಬೇಕು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಇದು ಅನೇಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.