ಬೇಕಾಗುವ ಸಾಮಾಗ್ರಿಗಳು: ಮೆಂತ್ಯ ಕಾಳು- 3 ಟೀ ಸ್ಪೂನ್, ಜೀರಿಗೆ – 3 ಟೀ ಸ್ಪೂನ್, ಕರಿಮೆಣಸು- 1 ಟೀ ಸ್ಪೂನ್, ಒಂದು ಇಂಚು ಚಕ್ಕೆ, ಲವಂಗ- 4, ಏಲಕ್ಕಿ- 3, ನೀರು- 2 ಲೋಟ, ಹಾಲು- ಮುಕ್ಕಾಲು ಲೋಟ
ಮಾಡುವ ವಿಧಾನ: ಬಾಣಲೆಗೆ ಮೆಂತ್ಯ ಕಾಳು, ಜೀರಿಗೆ, ಕರಿಮೆಣಸು, ಒಂದು ಇಂಚು ಚೆಕ್ಕೆ, ಲವಂಗ, ಏಲಕ್ಕಿ ಹಾಕಿ ಚೆನ್ನಾಗಿ ಹುರಿಯಿರಿ. ಎಣ್ಣೆ ಹಾಕದೇ ಹುರಿಯಿರಿ. ಬಳಿಕ ತಣ್ಣಗಾದ ಕೂಡಲೇ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ 2 ಲೋಟದಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ.
ಠೇವಣಿದಾರರಿಗೆ ʼನೆಮ್ಮದಿʼ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ
ನೀರು ಕುದಿ ಬಂದಾಗ 1.5 ಟೀ ಸ್ಪೂನ್ ಪುಡಿ ಮಾಡಿಟ್ಟಿರುವ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸಕ್ಕರೆ ಇಲ್ಲವೇ ಬೆಲ್ಲ ಸೇರಿಸಿ. ಆಗಾಗ ಕೈಯಾಡಿಸುತ್ತಾ ಇರಿ. ಚೆನ್ನಾಗಿ ಕುದಿ ಬಂದಾಗ ಮುಕ್ಕಾಲು ಲೋಟದಷ್ಟು ಹಾಲು ಸೇರಿಸಿ ಕುದಿಸಿ. ಹಾಲು ಚೆನ್ನಾಗಿ ಕುದಿ ಬಂದ ಬಳಿಕ ಒಂದು ಪಾತ್ರೆಗೆ ಸೋಸಿಟ್ಟುಕೊಂಡರೆ, ಬಿಸಿ ಬಿಸಿ ಕಷಾಯ ರೆಡಿ.