ತುಂಬಾ ದಿನ ಫ್ರೆಶ್‌ ಆಗಿರಲು ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ

ಪಲಾವ್ ರುಚಿ ಹೆಚ್ಚಿಸುವ ಹಸಿರು ಬಟಾಣಿ ಸೇವಿಸಲು ಚಳಿಗಾಲದವರೆಗೆ ಕಾಯಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಎಲ್ಲ ಋತುವಿನಲ್ಲೂ ಬಟಾಣಿ ಸಿಗುತ್ತದೆ. ಆದ್ರೆ ಬಟಾಣಿ ರುಚಿ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹಸಿರು ಬಟಾಣಿಯನ್ನು ಮನೆಯಲ್ಲಿ ಅನೇಕ ದಿನದವರೆಗೆ ರಕ್ಷಿಸಬಹುದು.

ಮೊದಲು ಹಸಿರು ಬಟಾಣಿ ಸಿಪ್ಪೆ ತೆಗೆಯಿರಿ. ನಂತ್ರ ಹಾಳಾದ ಬಟಾಣಿಯನ್ನು ಬೇರ್ಪಡಿಸಿ. ಈಗ ಬಟಾಣಿಯನ್ನು ನೀರಿನಲ್ಲಿ ತೊಳೆಯಿರಿ. ನಾಲ್ಕರಿಂದ ಐದು ನಿಮಿಷದಲ್ಲಿ ಬಟಾಣಿಯನ್ನು ಹೊರಗೆ ತೆಗೆದು ಪಾತ್ರೆಗೆ ಹಾಕಿ.

ಹತ್ತಿ ಬಟ್ಟೆ ಅಥವಾ ಹಾಳೆಯಲ್ಲಿ ಹಸಿರು ಬಟಾಣಿಯನ್ನು ಹಾಕಿ. ಅದ್ರಲ್ಲಿರುವ ನೀರು ಆರುವವರೆಗೆ ಹಾಗೆ ಇರಲಿ. ಬಟಾಣಿಯಲ್ಲಿ ನೀರಿರದಂತೆ ನೋಡಿಕೊಳ್ಳಿ. ಐದರಿಂದ ಏಳು ನಿಮಿಷಗಳ ಕಾಲ ಬಟಾಣಿಯನ್ನು ಬಿಸಿಲಿನಲ್ಲಿ ಒಣಗಿಸಬಹುದು. ಬಟಾಣಿ ನೀರು ಆರಿದ ನಂತ್ರ ಜಿಪ್ ಲಾಕ್ ಪಾಲಿಥೀನ್‌ನಲ್ಲಿ ತುಂಬಿಸಿ ಫ್ರೀಜರ್‌ನಲ್ಲಿ ಸಂಗ್ರಹಿಸಿ. ಬಿಗಿಯಾದ ಪಾತ್ರೆಯಲ್ಲೂ ಇಡಬಹುದು. ಹೀಗೆ ಮಾಡಿದಲ್ಲಿ ಹಸಿರು ಬಟಾಣಿಗೆ ಐಸ್ ಹೆಪ್ಪುಗಟ್ಟುವುದಿಲ್ಲ. ಅನೇಕ ದಿನಗಳ ಕಾಲ ಬಟಾಣಿ ತಾಜಾ ಆಗಿರುತ್ತದೆ. ವಾರಕ್ಕೊಮ್ಮೆ ಫ್ರಿಜರ್ ನಿಂದ ತೆಗೆದು ಅಲ್ಲಾಡಿಸಿ ಮತ್ತೆ ಇಡಿ. ಬಟಾಣಿ ಬಳಸುವ ಮೊದಲು ನಾಲ್ಕೈದು ನಿಮಿಷ ನೀರಿನಲ್ಲಿ ನೆನೆಸಿಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read