alex Certify ಸವಿಯಾದ ಬಾಳೆಹಣ್ಣಿನ ಹಲ್ವಾ ಮನೆಯಲ್ಲೇ ತಯಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿಯಾದ ಬಾಳೆಹಣ್ಣಿನ ಹಲ್ವಾ ಮನೆಯಲ್ಲೇ ತಯಾರಿಸಿ

ಬೇಕಾಗುವ ಸಾಮಾಗ್ರಿಗಳು: ಏಲಕ್ಕಿ ಬಾಳೆಹಣ್ಣು/ಯಾವುದೇ ಬಾಳೆಹಣ್ಣು- 20, ಸಕ್ಕರೆ-3ಕಪ್, ತುಪ್ಪ, ಗೋಡಂಬಿ, 3 ಏಲಕ್ಕಿ.

ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ 3 ಟೀಸ್ಪೂನ್ ತುಪ್ಪ ಹಾಕಿ ರುಬ್ಬಿರುವ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಮಧ್ಯಮ ಉರಿಯಲ್ಲಿಟ್ಟೇ ಬೇಯಿಸಬೇಕು. 15 ನಿಮಿಷ ಬಾಳೆಹಣ್ಣಿನ ಬಣ್ಣ ಬದಲಾಗುತ್ತದೆ. ಈ ವೇಳೆಗೆ ಇದಕ್ಕೆ 3 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಹಲ್ವಾ ಗಟ್ಟಿಯಾಗುತ್ತಾ ಬರುವಾಗ ಸ್ವಲ್ಪ ತುಪ್ಪ ಸೇರಿಸಬೇಕು. ಬಳಿಕ ಹುರಿದಿಟ್ಟ ಗೋಡಂಬಿ, ಏಲಕ್ಕಿ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಹಲ್ವಾ ತಯಾರಾಗಲು 1 ಗಂಟೆ 15 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಗಟ್ಟಿಯಾದಾಗ ಒಂದು ತಟ್ಟೆಗೆ ತುಪ್ಪ ಸವರಬೇಕು. ಮಾಡಿದಂತಹ ಹಲ್ವಾವನ್ನು ತಟ್ಟೆಗೆ ಹಾಕಬೇಕು. ತಣಿದ ಬಳಿಕ ನಿಮಗೆ ಬೇಕಾದಂತಹ ಆಕಾರದಲ್ಲಿ ಕಟ್ ಮಾಡಿಕೊಂಡರೆ ತಿನ್ನಲು ಬಾಳೆಹಣ್ಣಿನ ಹಲ್ವಾ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...