ಧೂಮಪಾನ ಮಾಡುವವರ ತುಟಿ ಕಪ್ಪಾಗುತ್ತೆ. ಇದು ಅವರ ಸೌಂದರ್ಯಕ್ಕೊಂದು ಕಪ್ಪುಚುಕ್ಕೆ. ಹಾಗೆ ಚಳಿಗಾಲದಲ್ಲಿ ಧೂಮಪಾನ ಮಾಡದವರ ತುಟಿ ಕೂಡ ಕಪ್ಪಾಗುವುದುಂಟು. ಗುಲಾಬಿ ತುಟಿ ಪಡೆಯಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸ್ತಾರೆ.
ಆದ್ರೆ ಮನೆಯಲ್ಲಿಯೇ ಈ ಕಪ್ಪು ತುಟಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಅಡುಗೆ ಸೋಡಾ ಸ್ಕ್ರಬ್ : ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ಸಕ್ಕರೆ ಮತ್ತು ಸ್ವಲ್ಪ ತೈಲವನ್ನು ಮಿಕ್ಸ್ ಮಾಡಿ. ತುಟಿಗೆ ಈ ಮಿಶ್ರಣವನ್ನು ಹಚ್ಚಿ 10-15 ಸೆಕೆಂಡ್ ಬಿಡಿ. ನಂತ್ರ ತುಟಿಯನ್ನು ತೊಳೆದುಕೊಳ್ಳಿ.
ಸಕ್ಕರೆ ಹಾಗೂ ಜೇನುತುಪ್ಪದ ಸ್ಕ್ರಬ್ : ಒಂದು ಚಮಚ ಸಕ್ಕರೆಗೆ ನಾಲ್ಕೈದು ಹನಿ ಜೇನು ತುಪ್ಪವನ್ನು ಬೆರೆಸಿ 2 ಸೆಕೆಂಡ್ ಸ್ಕ್ರಬ್ ಮಾಡಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದ್ರ ನಂತ್ರ ಪೆಟ್ರೋಲಿಯಂ ಜೆಲ್ ಹಚ್ಚಿ.
ವೆನಿಲಾ ಸ್ಕ್ರಬ್ : ಎರಡು ಚಮಚ ಸಕ್ಕರೆಗೆ ಒಂದೆರಡು ಹನಿ ವೆನಿಲಾ ಎಸೆನ್ಸ್ ಹಾಗೂ ಆಲಿವ್ ಆಯಿಲನ್ನು ಮಿಕ್ಸ್ ಮಾಡಿ. ಇದನ್ನು 10 ಸೆಕೆಂಡುಗಳ ಕಾಲ ತುಟಿಗೆ ಸ್ಕ್ರಬ್ ಮಾಡಿ.