ಮೇಷ : ಆದಾಯಕ್ಕಿಂತ ಖರ್ಚಿನ ಪ್ರಮಾಣವೇ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಸಮಾಧಾನ ನೆಲೆಸಲಿದೆ. ಕುಟುಂಬ ಸದಸ್ಯರ ಜೊತೆ ಅತ್ಯುತ್ತಮ ಕ್ಷಣವನ್ನ ಕಳೆಯಲಿದ್ದೀರಿ. ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ಬರಲಿದೆ. ಸಾಧಿಸಲೇಬೇಕೆಂಬ ಛಲದಿಂದ ಕಚೇರಿಯಲ್ಲಿ ಪ್ರಶಂಸೆ ಗಳಿಸಲಿದ್ದೀರಿ.
ವೃಷಭ : ಬುದ್ಧಿವಂತ ಹೂಡಿಕೆಯಿಂದ ಖಂಡಿತವಾಗಿಯೂ ಲಾಭ ಕಾದಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಕಾಣಲಿದ್ದೀರಿ. ದಾಂಪತ್ಯ ಜೀವನವು ಸುಖಮಯವಾಗಿರಲಿದೆ. ಹಿರಿಯರೊಂದಿಗೆ ಅನಗತ್ಯ ವಾದ ಬೇಡ. ಯೋಗ್ಯ ಜನರ ಸಹಕಾರದಿಂದ ಲಾಭ ಕಾದಿದೆ.
ಮಿಥುನ : ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗದಿಂದ ಉತ್ತಮ ಅವಕಾಶ ಪಡೆಯಲಿದ್ದಾರೆ. ನೀವು ಮಾಡುವ ಕೆಲಸಗಳ ಮೇಲೆ ಶ್ರದ್ಧೆ ಇರಲಿ. ಮನೆಯಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ವಿವಾಹ ಸಂಬಂಧಗಳಿಗೆ ಕಾಯುತ್ತಿರುವವರಿಗೆ ಶುಭ ಸುದ್ಧಿ ಕಾದಿದೆ.
ಕಟಕ : ನಿಮ್ಮ ಕಷ್ಟಗಳನ್ನ ಸ್ನೇಹಿತರ ಜೊತೆ ಹೇಳಿಕೊಳ್ಳಿ. ಒಬ್ಬರೇ ಕೊರಗಬೇಡಿ. ಬಡ್ತಿ ಇಲ್ಲವೇ ಸಂಬಳ ಏರಿಕೆಯ ಶುಭಸುದ್ಧಿಯನ್ನ ಕೇಳುತ್ತೀರಿ. ಹಣ ಎಲ್ಲಿ ವ್ಯಯವಾಗುತ್ತಿದೆ ಅನ್ನೋದರ ಮೇಲೆ ಗಮನವಿರಲಿ. ಸಂಗಾತಿ ನೀಡುವ ಸಲಹೆಗಳನ್ನ ಆಲಿಸಿ.
ಸಿಂಹ : ಒತ್ತಡ ಕಡಿಮೆಯಾಗಬೇಕು ಅಂದರೆ ಸಂಗೀತ ಆಲಿಸಿ. ಹಳೆಯ ಸಾಲಗಳನ್ನ ಚುಕ್ತಾ ಮಾಡಲಿದ್ದೀರಿ. ನಗು ನಗುತ್ತಾ ಕಷ್ಟವನ್ನ ಮರೆಯಲು ಯತ್ನಿಸುವ ನಿಮ್ಮ ಗುಣವನ್ನ ಮುಂದುವರಿಸಿ. ಸಂಗಾತಿ ಜೊತೆ ಕಿರಿಕಿರಿ ಎನಿಸಲಿದೆ. ಆದರೆ ತಾಳ್ಮೆ ಕಾಯ್ದುಕೊಂಡಲ್ಲಿ ಪರಿಸ್ಥಿತಿ ನಿಮ್ಮ ನಿಯಂತ್ರಣಕ್ಕೆ ಬರಲಿದೆ.
ಕನ್ಯಾ : ವಿವಿಧ ಮೂಲಗಳಿಂದ ಹಣಕಾಸು ಲಾಭವಿದೆ. ಕಚೇರಿಯಲ್ಲಿ ಹಿತಶತ್ರುಗಳ ಕಾಟವಿದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ. ಹೊರಗಿನ ಆಹಾರಗಳನ್ನ ಸೇವಿಸಲೇಬೇಡಿ. ಜವಳಿ ಉದ್ಯಮದವರಿಗೆ ಉತ್ತಮ ಲಾಭವಿದೆ. ಕೃಷಿ ಕ್ಷೇತ್ರದಲ್ಲಿ ಇರುವವರೂ ಶುಭ ಸುದ್ದಿಯನ್ನ ಕೇಳಲಿದ್ದೀರಿ.
ತುಲಾ : ಹಿರಿಯರ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶವಿದೆ. ಸಂತಾನ ಭಾಗ್ಯವಿದೆ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಲೂಬಹುದು.
ವೃಶ್ಚಿಕ : ಕುಟುಂಬ ಸದಸ್ಯರ ಜೊತೆ ಉತ್ತಮ ಕ್ಷಣವನ್ನ ಕಳೆಯಲಿದ್ದೀರಿ. ಸಂಶಾಯಸ್ಪದ ಎನ್ನಿಸುವ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಮೇಲಾಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.
ಧನು : ಸಂಬಂಧಿಗಳಿಂದ ಶುಭ ಸುದ್ದಿ ಕೇಳುವ ನೀವು ಇಡೀ ದಿನ ಸಂತೋಷದಿಂದ ಇರಲಿದ್ದೀರಿ. ತಿರುಗಾಟ ತುಸು ಹೆಚ್ಚಿದ್ದರೂ ಆದಾಯದಲ್ಲಿ ಲಾಭವಿದೆ. ಅಪರಿಚಿತರ ಜೊತೆ ಹೆಚ್ಚು ಮಾತು ಬೇಡ. ಕುಲದೇವತೆಯನ್ನ ಆರಾಧಿಸಿ.
ಮಕರ : ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಕಲಹ ಏರ್ಪಡಬಹುದು. ವಯಸ್ಕರಿಗೆ ವೈವಾಹಿಕ ಸಂಬಂಧಗಳು ಗಟ್ಟಿಯಾಗಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.
ಕುಂಭ : ಅನಗತ್ಯ ವಾದದಿಂದ ಸ್ನೇಹಿತರನ್ನ ಕಳೆದುಕೊಳ್ಳಬೇಡಿ. ಅನಿರೀಕ್ಷಿತ ಮೂಲದಿಂದ ಆದಾಯ ಬರಲಿದೆ. ರಾಜಕೀಯ ಕ್ಷೇತ್ರ, ವೈದ್ಯ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಅವಕಾಶವಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಕುಲದೇವತೆಯನ್ನ ಆರಾಧಿಸಲಿದ್ದೀರಿ.
ಮೀನ : ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಾದಿದೆ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ಒದಗಿ ಬರಲಿದೆ. ವಿದ್ಯಾರ್ಥಿಗಳಿಗೆ ಇದು ಶುಭದಿನವಾಗಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ.