ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಯಾರಿಸುವುದು ತುಂಬಾ ಸುಲಭ. ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುತ್ತಾರೆ. ಇದು ಅಧಿಕವಾದ ಜೀವಸತ್ವಗಳನ್ನು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ತರಕಾರಿ ಸಲಾಡ್ ತಯಾರಿಸುವಾಗ ಈ ತರಕಾರಿಗಳನ್ನು ತಪ್ಪದೆ ಸೇರಿಸಿಕೊಳ್ಳಿ.
*ಸೌತೆಕಾಯಿ : ಸೌತೆಕಾಯಿಯಲ್ಲಿ 90 ಪ್ರತಿಶತದಷ್ಟು ನೀರಿರುತ್ತದೆ. ಇದು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಎ, ಬಿ1, ಬಿ6, ಸಿ, ಕಬ್ಬಿಣ ಮತ್ತು ಪೊಟ್ಯಾಸಿಯಂ ಇತ್ಯಾದಿಗಳು ಹೇರಳವಾಗಿರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ.
*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮ್ಮ ಸಲಾಡ್ ನಲ್ಲಿ ಕ್ಯಾರೆಟ್ ಅನ್ನು ಸೇರಿಸಿಕೊಳ್ಳಿ. ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟಿನ್ ಎಂಬ ವಿಟಮಿನ್ ಕಂಡುಬರುತ್ತದೆ. ಇದು ದೃಷ್ಟಿಗೆ ಉತ್ತಮವಾಗಿದೆ. ಇದು ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಮಧುಮೇಹ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ರಕ್ಷಿಸುತ್ತದೆ.
*ಟೊಮೆಟೊವನ್ನು ನಿಮ್ಮ ಸಲಾಡ್ ನಲ್ಲಿ ಸೇರಿಸಿ. ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಫೈಬರ್ ಅನ್ನು ಹೊಂದಿದ್ದು , ಅದು ದೇಹವನ್ನು ಆರೋಗ್ಯಕರವಾಗಿಸುತ್ತದೆ.