ಬಾದಾಮಿ ನೆನೆಸಿ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬರ್ಫಿ, ಖೀರ್ ಎಲ್ಲದರ ರುಚಿ ನೋಡಿರ್ತಿರಿ. ಇಂದು ಬಾದಾಮಿ ಕಟ್ಲೆಟ್ ಮಾಡೋದು ಹೇಗೆ ಅಂತಾ ಹೇಳ್ತೆವೆ ಕೇಳಿ.
ಬಾದಾಮಿ ಕಟ್ಲೆಟ್ ಮಾಡಲು ಬೇಕಾಗುವ ಪದಾರ್ಥ
ಬಾದಾಮಿ ಪುಡಿ – 25 ಗ್ರಾಂ
ಒಣದ್ರಾಕ್ಷಿ – 25 ಗ್ರಾಂ
ಎರಡು ಬೇಯಿಸಿದ ಆಲೂಗಡ್ಡೆ
2 ಚಮಚ ಹಿಸುಕಿದ ಪನೀರ್
ಬ್ರೆಡ್ ಕ್ರಂಬ್ಸ್ – 2 ಚಮಚ
ಚಾಟ್ ಮಸಾಲ ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಹಸಿ ಮೆಣಸಿನಕಾಯಿ
ಕಾರ್ನ್‌ಫ್ಲೋರ್ – ಮೂರು ಚಮಚ
ಗಸಗಸೆ ಒಂದು ಚಮಚ
ಅಗತ್ಯಕ್ಕೆ ಬೇಕಾಗುವಷ್ಟು ಎಣ್ಣೆ
ಬಾದಾಮಿ ಕಟ್ಲೆಟ್ ತಯಾರಿಸುವ ವಿಧಾನ
ದ್ರಾಕ್ಷಿ ಹಾಗೂ ಬಾದಾಮಿಯನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಬಾದಾಮಿ ಸಿಪ್ಪೆ ತೆಗೆಯಿರಿ. ಇದಕ್ಕೆ ಚಾಟ್ ಮಸಾಲಾ ಹಾಕಿ. ಈ ಮಿಶ್ರಣಕ್ಕೆ ನಂತರ ಬೇಯಿಸಿದ ಆಲೂಗಡ್ಡೆ, ಪನೀರ್, ಬ್ರೆಡ್ ಕ್ರಂಬ್ಸ್, ಉಪ್ಪು ಹಾಕಿ.
ನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅದರೊಳಗೆ ದ್ರಾಕ್ಷಿ ಹಾಕಿ. ಕಾರ್ನ್‌ಫ್ಲೋರ್ ನೀರಿನಲ್ಲಿ ಕಲಸಿ. ತಯಾರಾದ ಕಟ್ಲೆಟ್‌ಗಳನ್ನು ಕಾರ್ನ್‌ಫ್ಲೋರ್ ದ್ರಾವಣದಲ್ಲಿ ಅದ್ದಿ. ನಂತರ ಅದರ ಮೇಲೆ ಗಸಗಸೆ ಹಾಕಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಕಟ್ಲೆಟ್‌ಗಳನ್ನು ಹಾಕಿ ಹುರಿಯಿರಿ.