ಆಂಟಿ ಬ್ಯಾಕ್ಟೀರಿಯಲ್ ಆಗಿ ಕಾರ್ಯನಿರ್ವಹಿಸುವ ಕಪ್ಪು ಉಪ್ಪು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹತೂಕವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದರಿಂದ ದೂರ ಮಾಡಬಹುದು. ಊಟವಾದ ಬಳಿಕ ಹೊಟ್ಟೆ ಭಾರ ಎನಿಸಿದರೆ ನೀರನ್ನು ಬಿಸಿ ಮಾಡಿ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಚಹಾದಂತೆ ಕುಡಿಯಿರಿ. ಇದು ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.
ಹೊಟ್ಟೆಯ ಹಲವು ಸಮಸ್ಯೆಗಳನ್ನು ಇದು ತಕ್ಷಣ ನಿವಾರಿಸುತ್ತದೆ. ಮಲಬದ್ಧತೆಯನ್ನು ದೂರ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿನೀರಿಗೆ ಎರಡು ಚಿಟಿಕೆ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ನಿಮ್ಮದೇಹವು ಆರೋಗ್ಯವಾಗಿರುತ್ತದೆ. ಕಫದ ಸಮಸ್ಯೆ ಇದ್ದರೆ ಕಪ್ಪು ಉಪ್ಪನ್ನು ಬಾಯಿಯಲ್ಲಿ ಇಟ್ಟುಕೊಂಡು ರಸವನ್ನು ಮಾತ್ರ ಸೇವಿಸಿರಿ. ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವೂ ಇದಕ್ಕಿದೆ.