ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ಜ್ವರ, ಶೀತದಂಥ ಸಮಸ್ಯೆಗೆ ನೆಲನೆಲ್ಲಿಯಲ್ಲಿ ಪರಿಹಾರವಿದೆ ಎಂಬುದೂ ನಿಮಗೆ ತಿಳಿದಿದೆಯೇ?
ನೆಲಕ್ಕೆ ಮಳೆಹನಿ ಬೀಳುತ್ತಲೇ ಅಲ್ಲಲ್ಲೇ ತಲೆಯೆತ್ತಿರುವ ನೆಲನೆಲ್ಲಿಯಿಂದ ನೀವು ಮಳೆಗಾಲದ ಕಾಯಿಲೆಗಳು ಬರದಂತೆ ತಡೆಯಬಹುದು. ನೆಲನೆಲ್ಲಿಯಿಂದ ತಯಾರಿಸಿದ ಕಷಾಯ ಹಾಗೂ ತಂಬುಳಿಯ ಸೇವನೆಯಿಂದ ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಹಲವು ವೈರಸ್ ಗಳನ್ನು ನಾಶಪಡಿಸುವ ಗುಣ ನೆಲನೆಲ್ಲಿಗಿದೆ. ಮೂತ್ರದ ಸಮಸ್ಯೆಗಳನ್ನೂ ಇದು ದೂರಮಾಡುತ್ತದೆ. ಗಾಯ, ಕಜ್ಜಿ, ತುರಿಕೆ ಹಾಗೂ ಜಂತುಹುಳುಗಳ ನಿವಾರಣೆಗೆ ಇದು ಪರಿಣಾಮಕಾರಿ ಎನ್ನಲಾಗಿದೆ.
ಹಲವು ಚರ್ಮರೋಗಗಳನ್ನು ದೂರಮಾಡುವ ಶಕ್ತಿಯೂ ಇದಕ್ಕಿದೆ ಎನ್ನಲಾಗಿದೆ. ಮಹಿಳೆಯರಿಗೆ ಋತುಸ್ರಾವದ ವೇಳೆ ಅಧಿಕ ರಕ್ತ ಹೋಗುತ್ತಿದ್ದರೆ ಆ ಸಂದರ್ಭದಲ್ಲಿ ನೆಲನೆಲ್ಲಿ ಕಷಾಯ ತಯಾರಿಸಿ ಕುಡಿಯುವುದು ಒಳ್ಳೆಯದು. ಇದರಿಂದ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ದೂರವಾಗುತ್ತವೆ ಎನ್ನಲಾಗಿದೆ.