
ನಮ್ಮ ದೇಹದ ಮೇಲಿರುವ ಕಲೆ, ಮಚ್ಚೆ ಎಲ್ಲವಕ್ಕೂ ಸಮುದ್ರ ಶಾಸ್ತ್ರದಲ್ಲಿ ಅರ್ಥವಿದೆ. ದೇಹದ ಮೇಲಿರುವ ಮಚ್ಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ಸ್ವಭಾವ ಹಾಗೂ ಭವಿಷ್ಯದ ಬಗ್ಗೆ ಮಾಹಿತಿ ನೀಡುತ್ತದೆ.
ಮೇಲ್ಭಾಗದ ತುಟಿಯ ಬಲ ಭಾಗದಲ್ಲಿ ಮಚ್ಚೆಯಿದ್ದವರು ಪ್ರೀತಿ ಮತ್ತು ಸಂಬಂಧದಲ್ಲಿ ವಿಶೇಷವಾಗಿರ್ತಾರೆ. ಸಂಗಾತಿಯಿಂದ ಹೆಚ್ಚು ಪ್ರೀತಿ ಇವರಿಗೆ ಲಭಿಸುತ್ತದೆ. ಮಹಿಳೆಯರು ಜೀವನ ಪೂರ್ತಿ ಪ್ರೀತಿಸುವ ಸಂಗಾತಿಯನ್ನು ಪಡೆಯುತ್ತಾರೆ. ಆದ್ರೆ ತುಟಿ ಮೇಲೆ ಮಚ್ಚೆಯಿರುವ ಪುರುಷರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಪುರುಷರು ಐಷಾರಾಮಿ ಜೀವನ ಇಷ್ಟಪಡ್ತಾರೆ.
ತುಟಿಯ ಎಡ ಭಾಗದಲ್ಲಿ ಮಚ್ಚೆಯಿರುವುದು ಅಷ್ಟು ಒಳ್ಳೆಯದಲ್ಲ. ಪ್ರೀತಿಯಲ್ಲಿ ಅಸಫಲತೆ ಸಿಗಲಿದೆ. ಸಂಗಾತಿಯಿಂದ ಹೆಚ್ಚಿನ ಪ್ರೀತಿ ಸಿಗುವುದಿಲ್ಲ. ಆದ್ರೆ ಈ ಭಾಗದಲ್ಲಿ ಮಚ್ಚೆಯಿರುವ ಮಹಿಳೆಯರು ಹೃದಯವಂತರಾಗಿರುತ್ತಾರೆ. ಪುರುಷರಿಗೆ ಕೋಪ ಹೆಚ್ಚಾಗುತ್ತದೆ.
ಕೆಳ ತುಟಿಯ ಬಲಭಾಗದಲ್ಲಿ ಮಚ್ಚೆಯಿದ್ದವರ ವೃತ್ತಿ ಜೀವನ ಅದ್ಭುತವಾಗಿರುತ್ತದೆ. ಕೆಲಸವನ್ನು ನಿಭಾಯಿಸುವುದ್ರಲ್ಲಿ ಇವರು ಮುಂದಿರುತ್ತಾರೆ. ನಾಯಕನಾಗುವ ಗುಣ ಇವರಲ್ಲಿರುತ್ತದೆ. ಪುರುಷರು ರೋಮ್ಯಾಂಟಿ ಆಗಿದ್ರೆ, ಮಹಿಳೆಯರು ಫಿಗರ್ ಬಗ್ಗೆ ಹೆಚ್ಚು ಗಮನ ನೀಡ್ತಾರೆ.
ಕೆಳ ತುಟಿಯ ಎಡ ಭಾಗದಲ್ಲಿ ಮಚ್ಚೆಯಿದ್ರೆ ಆಹಾರದ ಜೊತೆ ಸುತ್ತಾಡುವ ಹವ್ಯಾಸ ಹೊಂದಿರುತ್ತಾರೆ. ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಾರೆ. ಗಂಭೀರ ರೋಗದ ಸಮಸ್ಯೆ ಇವರನ್ನು ಕಾಡುತ್ತದೆ. ಮಹಿಳೆಯರು, ಪುರುಷ ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾರೆ.