alex Certify ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..?

Should I be co-sleeping with my child?

ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಪಾಲಕರನ್ನು ಕಾಡುತ್ತವೆ. ಇದ್ರಲ್ಲಿ ಮಕ್ಕಳ ಮಲಗುವ ವಿಚಾರ ಕೂಡ ಸೇರಿದೆ. ಮಕ್ಕಳನ್ನು ಸ್ವಾವಲಂಬಿ ಮಾಡಲು ಅನೇಕ ಪಾಲಕರು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಬೇರೆ ಮಲಗಿಸಲು ಶುರು ಮಾಡ್ತಾರೆ. ಆದ್ರೆ ಮಗು, ಹೆತ್ತವರ ಜೊತೆ ಮಲಗಬೇಕು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.

ಮಕ್ಕಳು ಪಾಲಕರ ಜೊತೆ ಮಲಗಿದ್ರೆ ಸುರಕ್ಷಿತವಾಗಿರುತ್ತಾರೆ. ಇದು ಅವರ ಮನಸ್ಸಿನಲ್ಲಿ ಸುರಕ್ಷತೆಯ ಭಾವವನ್ನು ಮೂಡಿಸುತ್ತದೆ. ಇದರಿಂದಾಗಿ ಒಳ್ಳೆಯ ನಿದ್ರೆ ಬರುತ್ತದೆ. ಯಾವುದೇ ರೀತಿಯ ಭಯ ಕಾಡುವುದಿಲ್ಲ. ರಾತ್ರಿ ಮಗುವನ್ನು ನೋಡಲು ಎದ್ದು ಹೋಗಬೇಕಾಗಿಲ್ಲ.

ಮಕ್ಕಳ ಜೊತೆ ಪಾಲಕರು ಮಲಗುವುದ್ರಿಂದ ಭಾವನಾತ್ಮಕ ಭಾವನೆ ಬೆಳೆಯುತ್ತದೆ. ಮಗುವಿನಲ್ಲಿನ ಭಾವನಾತ್ಮಕ ಬಾಂಧವ್ಯವು  ಹೆತ್ತವರ ಜೊತೆ ಮಲಗುವುದರಿಂದ ಪ್ರಾರಂಭವಾಗುತ್ತದೆ. ಮಗು ಅತ್ತಾಗ ಶಾಂತಗೊಳಿಸಬೇಕು. ಡಯಾಪರ್ ಬದಲಾಯಿಸಬೇಕು. ಪಾಲಕರು ಜೊತೆಯಲ್ಲಿದ್ದಾಗ ಮಗು ಇದ್ರ ಚಿಂತೆಯಿಲ್ಲದೆ ಇರುತ್ತದೆ.

ಹೆತ್ತವರೊಂದಿಗೆ ಮಲಗುವ ಮಕ್ಕಳಲ್ಲಿ ಸಂತೋಷ, ತೃಪ್ತಿ ಹೆಚ್ಚಾಗುತ್ತದೆ. ಸ್ವಾಭಿಮಾನಿಗಳಾಗಿರುತ್ತಾರೆ. ಯಾವುದಕ್ಕೂ ಅವರು ಹೆದರುವುದಿಲ್ಲ. ಅನಗತ್ಯ ಒತ್ತಡಕ್ಕೆ ಒಳಗಾಗುವುದಿಲ್ಲ.

ಮಗು ಪಾಲಕರ ಜೊತೆ ಮಲಗಿದಲ್ಲಿ ದಿನಚರಿ ಸರಿಯಾಗಿರುತ್ತದೆ. ಮಗು ಪಾಲಕರ ಜೊತೆ ಮಲಗುತ್ತದೆ. ಹಾಗೆ ಪಾಲಕರ ಜೊತೆ ಏಳುತ್ತದೆ. ಮಕ್ಕಳಿಗೆ ಆರೋಗ್ಯಕರ ದಿನಚರಿ ತಿಳಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...