ಬೆಳಗ್ಗೆ ಎದ್ದ ತಕ್ಷಣ ಕಣ್ಣು ಊದಿಕೊಳ್ಳುವ ಸಮಸ್ಯೆ ಅನೇಕರನ್ನ ಕಾಡುತ್ತೆ. ಇದಕ್ಕೆ ಪಫಿನೆಸ್ ಅಂತಾ ಕರೀತಾರೆ. ಕಣ್ಣಿನ ಸುತ್ತ ಇರುವ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತೆ. ಅತಿಯಾದ ಜಂಕ್ಫುಡ್ ಸೇವನೆ, ಅತಿಯಾದ ನಿದ್ರೆ, ಮದ್ಯಪಾನ ಇವುಗಳು ಕಣ್ಣು ಊದಿಕೊಳ್ಳೋಕೆ ಮುಖ್ಯ ಕಾರಣವಾಗಿದೆ. ಇದನ್ನ ವಾಸಿ ಮಾಡೋಕೆ ಸಾಧ್ಯನೇ ಇಲ್ಲ ಎಂದು ನೀವು ಎಂದುಕೊಂಡಿರಬಹುದು. ಆದರೆ ಮನೆ ಮದ್ದಿನ ಮುಖಾಂತರವೇ ನೀವು ಕಾಯಿಲೆಯಿಂದ ಗುಣಮುಖರಾಗಬಹುದಾಗಿದೆ.
ಮಂಜುಗಡ್ಡೆಯ ನೀರಿನಿಂದ ಮುಖವನ್ನ ತೊಳೆದುಕೊಂಡಲ್ಲಿ ಈ ಸಮಸ್ಯೆ ವಾಸಿಯಾಗಲಿದೆ. ಬಟ್ಟೆಯ ಒಳಗೆ ಮಂಜುಗಡ್ಡೆಯನ್ನಿಟ್ಟು ಅದನ್ನ ಕಣ್ಣಿನ ಸುತ್ತ ಮಸಾಜ್ ಮಾಡಿ. ಈ ರೀತಿ ಮಾಡೋದ್ರಿಂದಲೂ ನಿಮ್ಮ ಸಮಸ್ಯೆ ದೂರಾಗಲಿದೆ.
ಸೌತೆಕಾಯಿ ದೇಹದ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಇದರ ಜೊತೆಯಲ್ಲಿ ಈ ಪಫಿನೆಸ್ ಸಮಸ್ಯೆಗೂ ಸೌತೆಕಾಯಿ ರಾಮಬಾಣ ಅನ್ನೋದನ್ನ ಮರೆಯೋ ಹಾಗಿಲ್ಲ. ಸೌತೆಕಾಯಿ ಪೀಸುಗಳನ್ನ ಮೊದಲು ಫ್ರಿಡ್ಜ್ನಲ್ಲಿಡಿ. ಬಳಿಕ ಇದನ್ನ ನಿಮ್ಮ ಕಣ್ಣುಗಳ ಮೇಲೆ 15 ನಿಮಿಷಗಳ ಕಾಲ ಇಟ್ಟುಕೊಳ್ಳಿ.
ನೀರಿನಲ್ಲಿ ಟೀ ಬ್ಯಾಗುಗಳನ್ನ ಅದ್ದಿ ಅದನ್ನ ಕೆಲ ಕಾಲ ಫ್ರಿಡ್ಜ್ನಲ್ಲಿಡಿ. ಬಳಿಕ ಇದನ್ನ ಕಣ್ಣಿನ ಮೇಲೆ ಇಟ್ಟುಕೊಳ್ಳಿ.
ಲೋಹದಿಂದ ಮಾಡಿದ ಚಮಚವನ್ನ ಫ್ರಿಡ್ಜ್ನಲ್ಲಿಟ್ಟು ಬಳಿಕ ಅದನ್ನ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆ ವಾಸಿಯಾಗಲಿದೆ.